ಬಿಸಿಯೂಟ ಸೇವಿಸಿದ ಸರ್ಕಾರಿ ಶಾಲೆಯ ಮಕ್ಕಳು ಹೊಟ್ಟೆ ನೋವಿನಿಂದ ಅಸ್ವಸ್ಥರಾದ ಘಟನೆ ಧಾರವಾಡ ನಗರದ ಟಿಸಿಡಬ್ಲು ಶಾಲೆಯಲ್ಲಿ ಕಳೆದ ಗುರುವಾರದಂದು ನಡೆದಿದೆ.


ವೈ- ಗುರುವಾರ ಮಧ್ಯಾಹ್ನ ಎಂದಿನಂತೆ ಶಾಲೆಗೆ ಬಂದ ಬಿಸಿಯೂಟ ಮಾಡಿದ ಟಿಸಿಡಬ್ಲ್ಯು ಸರ್ಕಾರಿ ಶಾಲೆಯ ಆರನೇ ತರಗತಿ ಶಾಲಾ ವಿದ್ಯಾರ್ಥಿನಿಯರು, ಏಕಾಏಕಿ ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಈ ವೇಳೆ ಶಿಕ್ಷಕಿಯರು ಕೆಲ ಮಕ್ಕಳನ್ನು ಶಾಲೆಯಲ್ಲೇ ಮಲಗಿಸಿ ಆರೈಕೆ ಮಾಡಿದ್ದಾರೆ.

ಆದರೆ, ನಂತರ ಹೊಟ್ಟೆ ನೋವು ಹೆಚ್ಚಾದ ಕಾರಣ 16 ಮಕ್ಕಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಿದ್ದಾರೆ. ಸದ್ಯ ಎಲ್ಲ 16 ಮಕ್ಕಳಿಗೆ ವೈದ್ಯರು ಸಲೈನ್ ಹಚ್ಚಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ವಿಷಯ ತಿಳಿದ ಕೂಡಲೇ ಶಾಸಕ ವಿನಯ ಕುಲಕರ್ಣಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಕ್ಕಳು ಭಯ ಬಿದ್ದಿದ್ದಾರೆ, ಅವರಿಗೆ ಧೈರ್ಯ ತುಂಬಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎಂದರು. ಡಿಡಿಪಿಐ, ಬಿಇಒ ಸೇರಿ ಶಾಲೆಯ ಎಲ್ಲ ಶಿಕ್ಷಕರು ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಯಾವ ಕಾರಣಕ್ಕಾಗಿ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತು ಎಂಬುದರ ಕುರಿತು ತಪಾಸಣೆ ನಡೆಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಧಾರವಾಡ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ವಿನಯ ಕುಲಕರ್ಣಿಯವರು ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಇನ್ನೂ ಮಕ್ಕಳ ಆರೋಗ್ಯದವೂ ಈಗ ಸುಧಾರಣೆಯಾಗುತ್ತಿದೆ ಎಂದು ವೈದ್ಯರು ಮಾಹಿತಿ ತಿಳಿಸಿದ್ದಾರೆ.
