ಕರ್ನಾಟಕ ರಾಜ್ಯ ಹಸಿರುಸೇನೆ ರೈತ ಸಂಘದ ಅಧ್ಯಕ್ಷ ಚುನ್ನಪ್ಪಾ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ, ಮಾಜಿ ಸಂಸದರು ಹಾಗೂ ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ ರಾಜು ಶೆಟ್ಟಿ ಮತ್ತು ಮಾರುತಿ ನಾನಾ ಚೌವಾಣ ಅವರ ನೇತೃತ್ವದಲ್ಲಿ ಮಂಗಸೂಳಿ ಗ್ರಾಮದಲ್ಲಿ ಸೆ. 13ರಂದು ಮಧ್ಯಾಹ್ನ 1 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಎಂದು ಐನಾಪುರದ ರೈತ ಹೋರಾಟಗಾರ ಸಂಜಯ್ ಬಿರಡಿ ತಿಳಿಸಿದರು.

ಮುಂದೆ ಮಾಹಿತಿ ನೀಡುವಾಗ ಮಂಗಸೂಳಿ ಗ್ರಾಮದ ಬಿರೂಬಾ ಮಂದಿರದ ಸಭಾಭವನದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕಬ್ಬು ಬೆಳೆಗಾರ ರೈತರ ಸಮಾವೇಶ ಹಾಗೂ ಹಸಿರು ಶಾಲೆ ಪರಿವರ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಹಿರಂಗ ಸಭೆಯಲ್ಲಿ ಪ್ರಸಕ್ತ ವರ್ಷದ ಕಬ್ಬಿನ ದರ ನಿಗದಿಪಡಿಸುವ ಕುರಿತು ಹಾಗೂ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಾಸದಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ವಿಶೇಷ ಚರ್ಚೆ ನಡೆಯಲಿದೆ.
ರೈತರ ಸಮಸ್ಯೆಗಳ ಕುರಿತು ನಡೆಯಲಿರುವ ಈ ಸಭೆಯ ಸದುಪಯೋಗವನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕಬ್ಬು ಬೆಳೆಗಾರ ರೈತ ಬಾಂಧವರು ಪಡೆದುಕೊಳ್ಳಬೇಕು ಎಂದು ಮಂಗಸೂಳಿ ಗ್ರಾಮದ ರೈತ ಸಂಘಟನೆಯ ಸದಸ್ಯರು ಮನವಿ ಮೂಲಕ ಆಹ್ವಾನಿಸಿದ್ದಾರೆ.
ಎಂದು ಸಂಜೆ ಬಿರಡಿ ತಿಳಿಸಿದರು.
