ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು 100 ದಿನಗಳ ಆಡಳಿತವನ್ನು ಪೂರ್ಣ ಗೊಳಿಸಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆಲಮಟ್ಟಿ ಜಲಾಶಯದ ಈ ವರ್ಣರಂಜಿತ ದೀಪಾಲಂಕಾರದ ದೃಶ್ಯವು ಪ್ರವಾಸಿಗರಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಅಳವಡಿಸಲಾಗಿರುವ ವಿದ್ಯುತ್ ದೀಪಗಳಂತೂ ಒಂದಕ್ಕಿಂತ ಒಂದು ಸುಂದರವಾಗಿ ಬಣ್ಣ ಬಣ್ಣದ ಬೆಳಕನ್ನು ಹೊರ ಸೂಸುತ್ತಿರುವುದರಿಂದ ಜಲರಾಶಿಯಲ್ಲಿ ತೇಲಿ ಬರುವ ಅಲೆ ನೋಡುವುದೇ ಒಂದು ಸಂಭ್ರಮ ಎನಿಸಿತು. ನೀರಿನ ಮೇಲೆ ತೇಲಿ ಬರುವ ಅಲೆಗಳ ಮೇಲೆ ರಾಚುವ ವಿವಿಧ ಬಗೆಯ ಬಣ್ಣದ ಬೆಳಕು ಮತ್ತಷ್ಟು ಮೆರಗು ನೀಡಿತು.

