ಬೆಳಗಾವಿಯ ಅಜಂ ನಗರದಲ್ಲಿರುವ ಶ್ರೀ ರೇಣುಕಾಶ್ರಮದ ಧರ್ಮಾಧಿಕಾರಿಗಳಾದ ಮಾತೋಶ್ರೀ ಗಂಗಾಮಾತಾಜಿ ಅವರಿಗೆ ಮಂಗಳವಾರ ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ರೇಣುಕ ಬಸವ ನಿಜಗುಣ ಪ್ರಶಸ್ತಿಯನ್ನು ಸಂಸ್ಥಾನದ ಅಧಿಪತಿಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೇಣುಕಾಶ್ರಮವನ್ನು ಆರಂಭಿಸಿ ಗಂಗಾಮಾತಾ ಜಿ ಅವರು 50 ವರ್ಷ ಗತಿಸಿವೆ. 50 ವರ್ಷಗಳಿಂದ ಈ ಆಶ್ರಮ ಕೂಡಲ ಸಂಗಮ, ತ್ರಿವೇಣಿ ಸಂಗಮವಾಗಿದೆ. ಇಲ್ಲಿ ಶ್ರೀ ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತ ಶಿಖಾಮಣಿ. ಬಸವಾದಿ ಶಿವಶರಣರ ವಚನ ಹಾಗೂ ಇತಿಹಾಸ ಶ್ರೀ ನಿಜಗುಣ ಶಿವಯೋಗಿಗಳು ರಚಿಸಿದ ಷಟಸ್ಥ ಶಾಸ್ತ್ರಗಳನ್ನು ಪ್ರವಚನ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಶ್ರೀ ಜಗದ್ಗುರು ಪಂಚಪೀಠಾಧಿಶ್ವರರು, ವೀರಕ್ತಮಠದ ಶ್ರೀ ನಿರಂಜನಮೂರ್ತಿಗಳು, ಅದ್ವೈತ ಮಠದ ಶ್ರೀ ಶಿವಯೋಗಿಗಳು ಎಲ್ಲರೂ ಕೂಡ ಆಗಮಿಸುತ್ತಾರೆ. ಇದು ತ್ರಿವೇಣಿ ಸಂಗಮವಾಗಿದೆ. ಭಾರತಕ್ಕೆ ಬೇಕಾಗಿರುವುದು ಎಲ್ಲಾ ಒಂದು ಎಂದು ಹೇಳುವ ಆಶ್ರಮಗಳು. ರೇಣುಕಾಶ್ರಮ ಎಲ್ಲರೂ ಒಂದು ಎಂದು ಹೇಳುವ ಆಶ್ರಮ. ಆ ಕಾರ್ಯವನ್ನು ಗಂಗಾಮಾತಾಜಿ ಅವರು ಮಾಡಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಗಂಗಾಮಾತಾಜಿ ಅವರು ಮಾತನಾಡಿ, ಈ ಪ್ರಶಸ್ತಿ ನನಗಲ್ಲ. ನನ್ನ ಭಕ್ತರಿಗೆ. ನನ್ನ ಭಕ್ತರು ಎಲ್ಲರೂ ಒಂದು ಎಂದು ನಡೆದುಕೊಳ್ಳುತ್ತಾರೆ. ಮಠ, ಆಶ್ರಮಗಳು ನಿಂತಿರುವುದು ಭಕ್ತರಿಂದ ಇಂದು ಎಲ್ಲ ಪರಂಪರೆಯ ಸ್ವಾಮೀಜಿ ಅವರು ಈ ಆಶ್ರಮಕ್ಕೆ ಬಂದು ಆಶೀರ್ವಾದ ಮಾಡುತ್ತಾರೆ. ಇದಕ್ಕಿಂತ ಭಾಗ್ಯ ಮತ್ತೊಂದಿಲ್ಲ. ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು ಆಶ್ರಮದ ಬಗ್ಗೆ ಅತೀವ ಕಾಳಜಿಯನ್ನು ಇರಿಸಿಕೊಂಡು ಆಶೀರ್ವದಿಸುತ್ತ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಿವ್ಯಾ ಅಂಗಡಿ, ಭುವನೇಶ್ವರಿ ಮುರನಾಳ, ಇಂದಿರಾ ಶಂಕರಗೌಡ, ವಸಂತಗೀತಾ ಹಿರೇಮಠ, ನಯನಾ ಗಿರಿಗೌಡ, ಸುನೀತಾ ಪಾಟೀಲ್ ಬಸವರಾಜ ಗೋಡಿಮಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
