ಬೆಳಗಾವಿ ನಗರದ ರಸ್ತೆಗಳ ಮೇಲಿನ ಗುಂಡಿಗಳನ್ನು ಮುಚ್ಚಲು ಅತ್ಯಾಧುನಿಕ ‘ಇನ್‌ಸ್ಟಾ ರೋಡ್ ಪ್ಯಾಚರ್’ ಎಂಬ ಹೊಸ ತಂತ್ರಜ್ಞಾನ ಆಧಾರಿತ ವಾಹನದ ಅಧಿಕೃತ ಚಾಲನೆ ನೀಡಲಾಯಿತು. ಪಿಬಿ ರಸ್ತೆ ಬಳಿ ಬೆಳಗಾವಿ ದಕ್ಷಿಣದ ಶಾಸಕ ಅಭಯ್ ಪಾಟೀಲ್, ಮೇಯರ್ ಮತ್ತು ಉಪಮೇಯರ್ ಅವರ ಉಪಸ್ಥಿತಿಯಲ್ಲಿ ಈ ಯಂತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಾರಂಭ ಮಾಡಲಾಯಿತು.


ಮಳೆಗಾಲದ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಂಡಿಗಳು ಬೀಳುವುದರಿಂದ ನಾಗರಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಈ ಆಧುನಿಕ ಪ್ಯಾಚ್‌ವರ್ಕ್ ಯಂತ್ರವನ್ನು ತರಲಾಗಿದೆ. ವಿಶೇಷವಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ವೇಗವಾಗಿ ಮುಚ್ಚಲು ಈ ಸರಳ ಮತ್ತು ಪರಿಣಾಮಕಾರಿ ವ್ಯವಸ್ಥೆಯು ಉಪಯುಕ್ತವಾಗಲಿದೆ. ಕರ್ನಾಟಕದಲ್ಲೇ ಮೊದಲ ಬಾರಿ ಇಂತಹ ಒಂದು ವ್ಯವಸ್ಥೆಯನ್ನು ಬೆಳಗಾವಿಯಲ್ಲಿ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ್ ಅವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದರು.

-ಇನ್ನು ಮಹಾಪೌರ ಪ್ರೀತಿ ಕಾಮಕರ್ ಅವರು
ಈ ಯಂತ್ರದ ನೆರವಿನಿಂದ ‘ಕೋಲ್ಡ್ ಡಾಂಬರೀಕರಣ’ ಮಾಡಿ ಪ್ರತ್ಯಕ್ಷವಾಗಿ ಗುಂಡಿ ಮುಚ್ಚುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಮಳೆಗಾಲದಲ್ಲೂ ರಸ್ತೆಗಳ ದುರಸ್ತಿ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಇನ್ನು ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ ಅವರು ಕೂಡ ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದರು.

