Belagavi

ಬೆಳಗಾವಿ: ಜಾಧವ್ ನಗರದ ಶ್ರೀ ಬ್ರಹ್ಮದೇವ. ಶ್ರೀ ನಾಗದೇವ ಹಾಗೂ ಶ್ರೀ ಕರೆಮ್ಮಾ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಸಂಭ್ರಮ; ಮಹಾಪ್ರಸಾದ

Share

ಬೆಳಗಾವಿ ನಗರದ ಜಾಧವ್ ನಗರದಲ್ಲಿರುವ ಪುರಾತನ ಶ್ರೀ ಬ್ರಹ್ಮದೇವ, ನಾಗದೇವ ಹಾಗೂ ಕರೆಮ್ಮಾ ದೇವಿಯ ದೇವಸ್ಥಾನದ ಜೀರ್ಣೋದ್ಧಾರಗೊಂಡು ಒಂದು ವರ್ಷ ಪೂರ್ಣಗೊಂಡಿರುವ ಸಂಭ್ರಮವನ್ನು ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದ್ದಾರೆ. ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಮತ್ತು ಮಹಾಪ್ರಸಾದ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ಬೆಳಗಾವಿ ನಗರದ ಜಾಧವ್ ನಗರದರಲ್ಲಿ ನೆಲೆಸಿರುವ ಸುಮಾರು ಹಲವಾರು ವರ್ಷಗಳಿಗೂ ಅಧಿಕ ಇತಿಹಾಸವಿರುವ ಅತ್ಯಂತ ಪುರಾತನವಾದ ಶ್ರೀ ಬ್ರಹ್ಮದೇವ, ನಾಗದೇವ ಹಾಗೂ ಕರೆಮ್ಮಾ ದೇವಿಯ ದೇವಸ್ಥಾನದ ಜೀರ್ಣೋದ್ಧಾರಗೊಂಡು ಒಂದು ವರ್ಷ ಪೂರ್ಣಗೊಂಡಿರುವ ಸಂಭ್ರಮಾಚರಣೆಯನ್ನು ಭಕ್ತರು ಅತ್ಯಂತ ಸಡಗರದಿಂದ ಆಚರಿಸಿದರು. ಈ ವಿಶೇಷ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು. ಸುತ್ತಮುತ್ತಲಿನ ಹತ್ತಾರು ಗ್ರಾಮಗಳು ಹಾಗೂ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಕೃತಾರ್ಥರಾದರು.

ಈ ಧಾರ್ಮಿಕ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ಮಾಜಿ ಮಹಾಪೌರ ಸವಿತಾ ಕಾಂಬಳೆ, ನಗರಸೇವಕ ಸಂದೀಪ್ ಜೀರಗ್ಯಾಳ ಹಾಗೂ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ದೇವರ ದರ್ಶನ ಪಡೆದು ಮಹಾಪ್ರಸಾದಕ್ಕೆ ಚಾಲನೆ ನೀಡಿದರು. ದೇವಸ್ಥಾನದ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕಾಗಿ ಐದು ಜನ ಪ್ರಮುಖರು ಮತ್ತು ಕಾರ್ಯಕರ್ತರು ಬಹಳ ಶ್ರಮ ವಹಿಸಿದ್ದು, ಹಿಂದಿನಿಂದಲೂ ನಡೆದುಬಂದಿರುವ ಮಹಾಪ್ರಸಾದದ ಈ ಉತ್ತಮ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಗಣ್ಯರು ಹರ್ಷ ವ್ಯಕ್ತಪಡಿಸಿದರು.

ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದ ಜೀರ್ಣೋದ್ಧಾರದ ಬಳಿಕ ನಡೆದ ಈ ಪ್ರಥಮ ವಾರ್ಷಿಕೋತ್ಸವದ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಯಿತು. ಮಹಾಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟ ಎಲ್ಲರಿಗೂ ಹಾಗೂ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ದೇವಸ್ಥಾನದ ಸಮಿತಿಯ ವತಿಯಿಂದ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಬಾಲಾಜೀ ಜಾಧವ್, ಶಕುಂತಲಾ ಜಾಧವ್, ಮಹೇಶ್ ಸೊಲ್ಲಾಪುರೆ, ಅನೀಲ್ ಹುಕ್ಕೇರಿ, ಸತೀಶ್ ಪಾಟೀಲ್, ಸಂತೋಷ್ ಶೆಟ್ಟಿ, ದೀಪಕ್ ತರಳೆ, ಯೋಗೇಶ್ ತರಳೆ, ಧನಂಜಯ್ ,ಯುವರಾಜ್ , ಶಾಂತಾ ಫಡಕೆ, ಮನೀಷಾ ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Tags:

error: Content is protected !!