ಬೆಳಗಾವಿಯ ಕಾಕರ್ ಗಲ್ಲಿಯಲ್ಲಿ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಚಾಲನೆ ನೀಡಿದರು.


ಈ ಸಮುದಾಯ ಭವನವು ಸ್ಥಳೀಯ ನಿವಾಸಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತಹ ಸುಸಜ್ಜಿತ ಸಾರ್ವಜನಿಕ ಸ್ಥಳವಾಗಿ ರೂಪುಗೊಳ್ಳಲಿದೆ. ನಿವಾಸಿಗಳು ಇಲ್ಲಿ ವಿವಿಧ ಸಮಾರಂಭಗಳನ್ನು ಆಚರಿಸಲು, ಸಭೆಗಳನ್ನು ನಡೆಸಲು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ದೊರೆಯಲಿದೆ.

ಎಲ್ಲಾ ವಯೋಮಾನದ ಜನರಿಗೆ ಉಪಯುಕ್ತವಾಗುವ ಈ ಸಮುದಾಯ ಭವನವು ನಿವಾಸಿಗಳನ್ನು ಒಂದೆಡೆ ಸೇರಿಸುವುದರ ಜೊತೆಗೆ, ಪರಸ್ಪರ ಬಾಂಧವ್ಯ ಮತ್ತು ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಯುವ ನಾಯಕ ಅಮಾನ್ ಸೇಠ್, ಕಾರ್ಪೊರೇಟರ್‌ಗಳು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

