ದೇಶದ ಗಡಿ ಭಾಗ ಹಾಗೂ ಆಂತರಿಕ ಭದ್ರತೆಯಲ್ಲಿ ಹಗಲಿರುಳು ಸೇವೆ ಸಲ್ಲಿಸಿ ನಿವೃತ್ತರಾಗುವ ಮಾಜಿ ಅರೆಸೇನಾ ಪಡೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಮಾಡಲು ಬೆಳಗಾವಿಯಲ್ಲಿ ಮಾಜಿ ಸಿಎಪಿಎಫ್ ಅಸೋಸಿಯೇಷನ್ ಪ್ರಮುಖ ಸಭೆ ನಡೆಸಿದೆ.


ನಗರದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ, ರಾಮದುರ್ಗ, ಯರಗಟ್ಟಿ, ಕಾಗವಾಡ, ಅಥಣಿ, ಗೋಕಾಕ ಮತ್ತು ಬೈಲಹೊಂಗಲ ಸೇರಿದಂತೆ ಎಲ್ಲಾ ತಾಲೂಕುಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಡಿಐಜಿ ಬಿಎಸ್‌ಎಫ್ಬೆಳಗಾವಿ: ಮಾಜಿ ಅರೆಸೇನಾ ಪಡೆಗಳ (CAPF) ಸಂಘಟನೆ ಬಲಪಡಿಸಲು ಪ್ರಮುಖ ಸಭೆ ಹಾಗೂ ಮಾಜಿ ಸಿಎಪಿಎಫ್ ಅಸೋಸಿಯೇಷನ್ ಬೆಳಗಾವಿ ಜಿಲ್ಲೆಯ ಗೌರವಾಧ್ಯಕ್ಷರಾದ ಅಶೋಕ್ ಅರ್ಜುನ್ ಪಾಟೀಲ್ ಸಭೆಯ ಉದ್ದೇಶವನ್ನು ವಿವರಿಸಿದರು. ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ, ಸಿಐಎಸ್‌ಎಫ್, ಎನ್‌ಎಸ್‌ಜಿ ಹಾಗೂ ಅಸ್ಸಾಂ ರೈಫಲ್ಸ್ ಪಡೆಗಳ ನಿವೃತ್ತ ಸಿಬ್ಬಂದಿಗಳು ಈ ಸಂಘಟನೆಯಡಿಯಲ್ಲಿ ಸೇರಿಕೊಂಡಿದ್ದು, ನಿವೃತ್ತ ಯೋಧರ ಮೂಲಭೂತ ಸೌಕರ್ಯಗಳ ರಕ್ಷಣೆ ಹಾಗೂ ಹಕ್ಕುಗಳಿಗಾಗಿ ಧೈರ್ಯದಿಂದ ಹೋರಾಡುವುದಾಗಿ ತಿಳಿಸಲಾಯಿತು.

ಸಭೆಯಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ಬೆಳಗಾವಿ, ಉಪಾಧ್ಯಕ್ಷರಾದ ಬಸವರಾಜ್ ಮಾಳಗಿ, ಎಂ.ಎಸ್. ಬಾಡಿಗೇರ, ರಾಜೇಶ್ವರಿ ವಿಜಯನ್, ವಿರೂಪಾಕ್ಷಿ ಕೋಲಕಾರ್, ಸಂಜಯ್ ಧನ್ವಂತರಿ, ಮಲ್ಲೇಶ್ ವಣ್ಣೂರ್, ವಿಠ್ಠಲ ಅರಳಗುಂಡಿ ಸೇರಿದಂತೆ ವಿವಿಧ ತಾಲೂಕುಗಳ ಪ್ರಮುಖರು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ಮಾಜಿ ಯೋಧರ ಕಲ್ಯಾಣಕ್ಕೆ ಬದ್ಧವಾಗಿರುವುದಾಗಿ ಈ ಸಭೆಯು ಮಹತ್ವದ ಸಂದೇಶ ಸಾರಿದೆ.
