Belagavi

ಬೆಳಗಾವಿ: ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರ ಕೈಜೋಡಿಸಿ – ಸ್ಪಂದನ ಸಂಸ್ಥೆ ನಿರ್ದೇಶಕಿ ಸುಶೀಲಾ ಕರೆ

Share

ವಿಶ್ವಸಂಸ್ಥೆಯು ನವೆಂಬರ್ 27 ಅನ್ನು ಅಂತರರಾಷ್ಟ್ರೀಯ ಬಾಲ್ಯವಿವಾಹ ನಿರ್ಮೂಲನಾ ದಿನವನ್ನಾಗಿ ಘೋಷಿಸಿದ್ದು, ದೇಶಾದ್ಯಂತ ಬಾಲವಿವಾಹ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲರೂ ಕೈಜೋಡಿಸಬೇಕು ಎಂದು ಸ್ಪಂದನ ಸಂಸ್ಥೆಯ ನಿರ್ದೇಶಕಿ ಸುಶೀಲಾ ಕರೆ ನೀಡಿದ್ದಾರೆ. ಬೆಳಗಾವಿ ಗ್ರಾಮಾಂತರ ತಾಲೂಕಿನಲ್ಲಿ ಬಾಲ್ಯವಿವಾಹ ತಡೆಗಟ್ಟಲು ಶ್ರಮಿಸಿದ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿದ್ದಾರೆ.

ಸೆಪ್ಟೆಂಬರ್ 4 ರಂದು ವಿಶ್ವಸಂಸ್ಥೆ ಅಸೆಂಬ್ಲಿಯಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ತಡೆಗಟ್ಟುವ ಸಲುವಾಗಿ ಐತಿಹಾಸಿಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ನವೆಂಬರ್ 27 ಅನ್ನು ಅಂತರರಾಷ್ಟ್ರೀಯ ಬಾಲ್ಯವಿವಾಹ ನಿರ್ಮೂಲನಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ. ‘ಜಸ್ಟಿಸ್ ರೈಟ್ಸ್ ಫಾರ್ ಚಿಲ್ಡ್ರನ್’ ಸಂಸ್ಥೆಯ ಸಹಯೋಗದೊಂದಿಗೆ 2024 ನವೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಅದರಂತೆ ದೇಶದಲ್ಲಿ ‘ಬಾಲವಿವಾಹ ಮುಕ್ತ ಭಾರತ’ ಆಂದೋಲನವನ್ನು ಯಶಸ್ವಿಯಾಗಿ ಮುನ್ನಡೆಸಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಯ 5ನೇ ಅಂಶದಡಿ ಲಿಂಗತ್ವ ಸಮಾನತೆ ಸಾಧಿಸಲು ಬಾಲ್ಯವಿವಾಹ ತಡೆಗಟ್ಟುವಿಕೆ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ಸ್ಪಂದನ ಸಂಸ್ಥೆಯು ಬಾಲ್ಯವಿವಾಹ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬೆಳಗಾವಿ ಗ್ರಾಮಾಂತರ ತಾಲೂಕಿನಲ್ಲಿ ಬಾಲವಿವಾಹ ತಡೆಯಲು ಅಹರ್ನಿಶಿ ಶ್ರಮಿಸಿರುವ ಶಿಕ್ಷಕರು ಹಾಗೂ ಅಂಗನವಾಡಿ ಮೇಲ್ವಿಚಾರಕರನ್ನು ಈ ವೇಳೆ ಗುರುತಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಕಾರ್ಯಕರ್ತರು ಪ್ರಮುಖರಾದ ಉಮಾ ಚನ್ನಿ, ಶಿವಲೀಲಾ ಹಿರೇಮಠ, ಸಿದ್ದಪ್ಪ ಹಿತ್ತಲಮನಿ ಹಾಗೂ ಆನಂದ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!