Belagavi

ಕಾರಂಜಿಮಠದಲ್ಲಿ ಸೆ.7ರಂದು ೩೦೩ನೇ ಶಿವಾನುಭವ ಹಾಗೂ ಮಹಿಳಾ ಸಮಾವೇಶ

Share

ನಗರದ ಶಿವಬಸವನಗರದಲ್ಲಿರುವ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ೩೦೩ನೇ ಶಿವಾನುಭವ ಕಾರ್ಯಕ್ರಮ ಹಾಗೂ ಶ್ರಾವಣ ಮಾಸದ ನಿಮಿತ್ತ ಮಹಿಳಾ ಸಮಾವೇಶವು ಸೆಪ್ಟೆಂಬರ್ 7ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಕಾರಂಜಿಮಠದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದು, ಪ್ರೊ. ವಸಂತಗೀತಾ ಹಿರೇಮಠ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಪದ್ಮಾ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಭಿಂಗೆ ಅವರ ಅಮೃತಾಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಡಾ. ಅರವಿಂದ ಕುಲಕರ್ಣಿ, ಪ್ರೊ. ಪದ್ಮಾ ಕುಲಕರ್ಣಿ, ಡಾ. ನಿರ್ಮಲಾ ಬಟ್ಟಲ, ಡಾ. ದುರ್ಗಾ ನಾಡಕರ್ಣಿ, ಆರ್.ಟಿ. ಶರಣ್, ಪ್ರಸಾದ ಕಾರಜೋಳ ಹಾಗೂ ಸ್ನೇಹಾ ಕುಲಕರ್ಣಿ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಗುವುದು.

ಅಶ್ವಿನಿ ಅಸುಂಡಿ ಹಾಗೂ ಜ್ಯೋತಿ ಬಿರಾದಾರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಶ್ರೀ ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳಿಂದ ಪ್ರಾರ್ಥನೆ ನೆರವೇರಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Tags:

error: Content is protected !!