Belagavi

ಬಾಲಿಕಾ ಆದರ್ಶ್‌ಗೆ ದ್ವಿಮಕುಟ, ಸಂತ ಮೀರಾ, ಸೇಂಟ್ ಜೇವಿಯರ್ಸ್ ವಿಜೇತ

Share

ಬೆಳಗಾವಿ ಕಾಂಟೋನ್‌ಮೆಂಟ್ ಶಾಲೆ ಆಯೋಜಿಸಿದ್ದ ನಗರ ಮತ್ತು ತಾಲ್ಲೂಕು ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಬಾಲಿಕಾ ಆದರ್ಶ್ ಶಾಲೆ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ದ್ವಿಮಕುಟ ಧರಿಸಿದೆ. ಕಾಂಟೋನ್‌ಮೆಂಟ್ ಶಾಲಾ ಮೈದಾನದಲ್ಲಿ ಜರುಗಿದ ಈ ರೋಮಾಂಚಕಾರಿ ಕ್ರೀಡಾಕೂಟದಲ್ಲಿ ಸಂತ ಮೀರಾ ಹಾಗೂ ಸೆಟ್ ಜೇವಿಯರ್ಸ್ ಶಾಲೆಗಳು ಕೂಡ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಮಿಂಚಿವೆ.

ಬೆಳಗಾವಿ ಕಾಂಟೋನ್‌ಮೆಂಟ್ ಶಾಲೆಯ ಆವರಣದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಹ್ಯಾಂಡ್‌ಬಾಲ್ ಪಂದ್ಯಾವಳಿಗಳು ಅತ್ಯಂತ ಕುತೂಹಲ ಮೂಡಿಸಿದವು. ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಸೆಟ್ ಜೇವಿಯರ್ಸ್ ಶಾಲೆ ಸಂತ ಮೀರಾ ತಂಡವನ್ನು ಮಣಿಸಿದರೆ, ಬಾಲಕಿಯರ ವಿಭಾಗದಲ್ಲಿ ಬಾಲಿಕಾ ಆದರ್ಶ್ ಶಾಲೆ ಸೇಂಟ್ ಜೇವಿಯರ್ಸ್ ತಂಡವನ್ನು ಸೋಲಿಸಿ ವಿಜೇತವಾಯಿತು. ಪ್ರೌಢಶಾಲಾ ವಿಭಾಗದಲ್ಲೂ ಪೈಪೋಟಿ ಮುಂದುವರಿದು, ಬಾಲಿಕಾ ಆದರ್ಶ್ ತಂಡವು ಭರ್ಜರಿ ಗೋಲುಗಳ ಅಂತರದಿಂದ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಸಮಾರಂಭದಲ್ಲಿ ಕಾಂಟೋನ್‌ಮೆಂಟ್ ಸಿಇಒ ಸುದಾಂ ಮಂಚಲ್‌ವಾರ್ ಸೇರಿದಂತೆ ಹಲವು ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಈ ಪಂದ್ಯಾವಳಿಯಲ್ಲಿ ವಿಜೇತ ಹತ್ತು ಹಲವು ತಂಡಗಳು ಮುಂಬರಲಿರುವ ಜಿಲ್ಲಾಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾಗಿವೆ. ಕ್ರೀಡಾಕೂಟದ ಯಶಸ್ಸಿಗೆ ನಿರ್ಣಾಯಕರು ಹಾಗೂ ಶಿಕ್ಷಕರು ವಿಶೇಷ ಶ್ರಮ ವಹಿಸಿದರು.

Tags:

error: Content is protected !!