ಬೆಳಗಾವಿಯ ಚಂದ್ರಗಿರಿ ಕ್ಯಾಂಪಸ್ನ ಅನುವರ್ತಿಕ್ ಮಿರ್ಜಿ ಭರತೇಶ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಏಎಮ್ ಬಿಐಟಿ ) ಕಾಲೇಜಿನಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಸೋಮವಾರ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಐಆರ್ಸಿಟಿಸಿ ನಿರ್ದೇಶಕರು ಹಾಗೂ ಬೆಳಗಾವಿ ಫೆರೋ ಕಾಸ್ಟ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಚಿನ್ ಸಬ್ನಿಸ್ ಅವರು ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡುತ್ತಾ, ತಾಂತ್ರಿಕ ಕ್ಷೇತ್ರದಲ್ಲಿನ ಪ್ರಸ್ತುತ ಅವಕಾಶಗಳು ಹಾಗೂ ವಿದ್ಯಾರ್ಥಿಗಳು ನಾವೀನ್ಯತೆಯನ್ನು ಬೆಳೆಸಿಕೊಳ್ಳುವ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ಹಾಗೆ ತಮ್ಮ ವಿದ್ಯಾರ್ಥಿ ಜೀವನ ಅನುಭವ ವಿವರಿಸುತ್ತ, ಇಂದಿನ ಪೀಳಿಗೆ ಲಭ್ಯ ಇರುವ ತಂತ್ರಜ್ಞಾನ ಬಳಸಿ ಉತ್ತಮವಾದ ಭವಿಷ್ಯ ರೂಪಿಸಿ ಕೊಳ್ಳವು ತಿಳಿಸಿದರು.
ಹಾಗೆಯೇ ಮಧ್ಯಾಹ್ನ ನಡೆದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳ ಸಮಾರಂಭದಲ್ಲಿ ಯುಲಾಟೆಕ್ ಸಂಸ್ಥೆಯ ಸಂಸ್ಥಾಪಕರು ಮತ್ತು ಸಿಇಒ ಶ್ರೀ ಹರ್ಷಿತ್ ರೆಡ್ಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಸ್ಟಾರ್ಟ್ಆಪ್ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು ಮತ್ತು ಏಎಮ್ ಬಿಐಟಿ ಕಾಲೇಜು ಹಲವು ಸ್ಟಾರ್ಟ್ ಆಪ್ ಗಳನ್ನು ಹೊಂದಿದ್ದು, ಮುಂದೆ ಬರುವ ದಿನಗಳಲ್ಲಿ ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಇಂಜಿನಿಯರ್ ಗಳನ್ನು ಸಮಾಜಕ್ಕೆ ಕೊಡಗೆ ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭರತೇಶ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸಾವಿತ್ರಿ ಆರ್. ದೊಡ್ಡಣ್ಣವರ, ಏಎಮ್ ಬಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಶಶಾಂಕ್ ಲಂಗಡೆ, ಟ್ರಸ್ಟ್ ನ ಪಧಾಧಿಕಾರಿಗಳು , ಆಡಳಿತಾಧಿಕಾರಿ ಡಾ. ಗೋಮಟೇಶ ರಾವಣಾವರ್, ಐರೈಸ್ ಡೈರೆಕ್ಟರ್ ಡಾ. ವೀಣಾ ಕರ್ಚಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎಸ್. ಪಾಟೀಲ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
