Belagavi

ಶ್ರೀರಾಮಸೇನಾ ಹಿಂದೂಸ್ಥಾನ್, ಎಂ.ಇ.ಎಸ್ ಮತ್ತು ಕೊಂಡೂಸ್ಕರ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ 2ನೇಯ ನೂತನ ಶವವಾಹನದ ಲೋಕಾರ್ಪಣೆ

Share

ಬೆಳಗಾವಿ ನಗರದಲ್ಲಿ ಸಂಕಷ್ಟದಲ್ಲಿದ್ದ ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಶ್ರೀರಾಮಸೇನಾ ಹಿಂದೂಸ್ಥಾನ, ಎಂ.ಇ.ಎಸ್ ಮತ್ತು ಕೊಂಡೂಸ್ಕರ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 2ನೇಯ ನೂತನ ಶವವಾಹನವು ಲೋಕಾರ್ಪಣೆಗೊಂಡಿದೆ.
ಬೆಳಗಾವಿಯ ಶಿವಬಸವ ನಗರದ ಕಾರಂಜಿಮಠ ಹಾಗೂ ಜೋತಿಬಾ ಮಂದಿರದ ಬಳಿ ರಮಾಕಾಂತ ಕೊಂಡೂಸ್ಕರ್ ಮತ್ತು ಚಂದ್ರಕಾಂತ ಕೊಂಡುಸ್ಕರ್ ಅವರ ಸಾಮಾಜಿಕ ಕಾಳಜಿಯ ಫಲವಾಗಿ ಶ್ರೀರಾಮಸೇನಾ ಹಿಂದೂಸ್ಥಾನ, ಎಂ.ಇ.ಎಸ್ ಮತ್ತು ಕೊಂಡೂಸ್ಕರ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಎರಡನೇ ಶವವಾಹನ ಸೇವೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ಪಾವನ ಉಪಸ್ಥಿತಿಯಲ್ಲಿ ಈ ಸಾರ್ಥಕ ಕಾರ್ಯಕ್ರಮವು ನೆರವೇರಿತು. ದುಃಖದ ಸಂದರ್ಭದಲ್ಲಿ ನಾಗರಿಕರಿಗೆ ತತ್‌ಕ್ಷಣದ ನೆರವು ಕಲ್ಪಿಸುವುದು ಮತ್ತು ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಶ್ಮಶಾನಭೂಮಿಗೆ ಸುರಕ್ಷಿತವಾಗಿ ತಲುಪಿಸುವುದು ಈ ಸೇವೆಯ ಮುಖ್ಯ ಉದ್ದೇಶವಾಗಿದ್ದು, ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಲು ಕೈಗೊಂಡ ಈ ಉಪಕ್ರಮವನ್ನು ಗುರುಗಳು ಶ್ಲಾಘಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಲಕ್ಷ್ಮೀಬಾಯಿ ಜಯಂತ್ ಕೊಂಡುಸ್ಕರ್, ಶ್ರೀಧರ್ ಅಳವಣಿ, ಜೋತಿಬಾ ಕಳಸೆಕರ್, ವಿನಾಯಕ ಕೃಷ್ಣಾಚೆ, ಮಾರುತಿ ಗುಂಡಕಲ್ಲ, ನಾರಾಯಣ್ ಕೊಂಡೂಸ್ಕರ್, ಶಿವಾಜೀರಾವ್ ಕೊಂಡೂಸ್ಕರ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ಧರು. ತುರ್ತು ಸಂದರ್ಭದಲ್ಲಿ ಜನಸಾಮಾನ್ಯರಿಗೆ ಆಸರೆಯಾಗಲಿರುವ ಈ ಶವವಾಹನ ಸೇವೆಯು ಸ್ಥಳೀಯರಲ್ಲಿ ಸಮಾಧಾನ ಮೂಡಿಸಿದ್ದು, ಈ ಜನಪರ ಕಾಳಜಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags:

error: Content is protected !!