Vijaypura

ಬದುಕಿದ್ದ ವ್ಯಕ್ತಿಯನ್ನೇ ಮೃತಪಟ್ಟವನೆಂದು ಬಿಂಬಿಸಿ 3.5 ಎಕರೆ ಜಮೀನು ಲಪಟಾಯಿಸಿದ ಖದೀಮರು!!!

Share

ಬದುಕಿರುವ ವ್ಯಕ್ತಿಯನ್ನೇ ಕಾಗದ ಪತ್ರಗಳಲ್ಲಿ ಸಾಯಿಸಿ ಕೋಟಿ ಮೌಲ್ಯದ ಜಮೀನನ್ನು ಕೊಳ್ಳೆ ಹೊಡೆದಿರುವ ಕರಾಳ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಜೀವಂತವಿರುವ ವ್ಯಕ್ತಿಯೊಬ್ಬರನ್ನು ಸತ್ತಿದ್ದಾನೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕೋಟ್ಯಂತರ ರೂ. ಬೆಲೆಬಾಳುವ ಜಮೀನನ್ನು ಬೇರೆಯವರ ಹೆಸರಿಗೆ ನೋಂದಾಯಿಸಿಕೊಂಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ರಾಂಪುರ ಗ್ರಾಮದ ಸರ್ವೇ ನಂ. 437A ಮತ್ತು 437Bಗೆ ಸೇರಿದ 3.5 ಎಕರೆ ಜಮೀನನ್ನು ಅನುಸೂಯ ಹಾಗೂ ಕೊಟ್ರೇಶ್ ಎಂಬುವವರ ಹೆಸರಿಗೆ ಕಬಳಿಸಲಾಗಿದೆ. ಈ ಅಕ್ರಮದ ಹಿಂದೆ ಗ್ರಾಮ ಆಡಳಿತ ಅಧಿಕಾರಿ (VEO) ಮತ್ತು ಕಂದಾಯ ನಿರೀಕ್ಷಕರ (RI) ಕೈವಾಡವಿದೆ ಎಂದು ಸಂತ್ರಸ್ಥ ಲಕ್ಮಪ್ಪ ನೇರ ಆರೋಪ ಮಾಡಿದ್ದಾರೆ. ಹಣದಾಸೆಗೆ ಬಿದ್ದ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಬದುಕಿರುವ ರೈತನನ್ನೇ ಕಾಗದದಲ್ಲಿ ಸಾಯಿಸಿ ಜಮೀನು ಲೂಟಿ ಮಾಡಿದ್ದು, ತಮಗೆ ಕೂಡಲೇ ನ್ಯಾಯ ಕೊಡಿಸುವಂತೆ ಸಂತ್ರಸ್ಥ ಲಕ್ಮಪ್ಪ ತಾಲೂಕಾಡಳಿತದ ಮುಂದೆ ಕಣ್ಣೀರಿಟ್ಟಿದ್ದಾರೆ.

Tags:

error: Content is protected !!