ಬೆಳಗಾವಿಯ ಮಹಾಂತೇಶ ನಗರದ ಬ್ರಹ್ಮಕುಮಾರೀಸ್ ಪ್ರಾದೇಶಿಕ ಮುಖ್ಯ ಕೇಂದ್ರದಲ್ಲಿ ದಾದಿ ಪ್ರಕಾಶಮಣಿ ಅವರ 19ನೇ ಸ್ಮೃತಿ ದಿನವನ್ನು ವಿಶ್ವ ಬಂಧುತ್ವ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಬ್ರಹ್ಮಕುಮಾರೀಸ್ ಪ್ರಾದೇಶಿಕ ಮುಖ್ಯ ಕೇಂದ್ರದಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆಯ ದಿವಂಗತ ಮಾಜಿ ಜಾಗತಿಕ ಪ್ರಮುಖ ದಾದಿ ಪ್ರಕಾಶಮಣಿ ಅವರ 19ನೇ ಸ್ಮೃತಿ ದಿನವನ್ನು ‘ವಿಶ್ವ ಬಂದುತ್ವ ದಿನ’ವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿ.ಕೆ. ಅಂಬಿಕಾ ಅಕ್ಕ, ರಾಜಯೋಗಿನಿ ಬಿ.ಕೆ. ದೇವಿಕಾ, ಬಿ.ಕೆ. ಮಂಜುಳಾ, ಬಿ.ಕೆ. ಈರಮ್ಮ, ಬಿ.ಕೆ. ವಿಶ್ವನಾಥ, ಬಿ.ಕೆ. ಯೋಗೇಶ್, ಬಿ.ಕೆ. ಶ್ರೀಕಾಂತ್, ಡಾ. ಇಂಗಳಗಿ ಹಾಗೂ ಸೇರಿದಂತೆ ಅನೇಕ ಬ್ರಹ್ಮಕುಮಾರ ಬ್ರಹ್ಮಕುಮಾರಿ ಬಂಧು-ಭಗಿನಿಯರು ಉಪಸ್ಥಿತರಿದ್ದು, ದಾದಿ ಪ್ರಕಾಶಮಣಿಯವರ ಸೇವೆಯನ್ನು ಸ್ಮರಿಸಿದರು.
