ಖಾನಾಪೂರ ತಾಲೂಕಿನ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿಯಾದ ಡಾ. ಅಂಜಲಿ ನಿಂಬಾಳ್ಕರ್ ಅವರು ಮಥುರಾದಲ್ಲಿ ‘ಸಂಘಟನ ಸೃಜನ್’ ಅಭಿಯಾನದ ಸಾರಥ್ಯ ವಹಿಸಿದ್ದಾರೆ. ಛತ್ತಾ ಬ್ಲಾಕ್ ಕಾಂಗ್ರೆಸ್ ಸಮಿತಿಯೊಂದಿಗೆ ಸಭೆ ನಡೆಸಿರುವ ಅವರು, ಹಿರಿಯ ಕಾರ್ಯಕರ್ತರ ನಿಷ್ಠೆಯನ್ನು ಶ್ಲಾಘಿಸಿ ಪಕ್ಷದ ಸಂಘಟನೆಗೆ ಹೊಸ ಹುರುಪು ತುಂಬಿದ್ದಾರೆ.


ಮಥುರಾ ಜಿಲ್ಲೆಯ ಛತ್ತಾ ಬ್ಲಾಕ್ನಲ್ಲಿ ನಡೆದ ಕಾಂಗ್ರೆಸ್ ಸಂಘಟನ ಸೃಜನ್ ಅಭಿಯಾನದ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಖಾನಾಪೂರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಪಾಲ್ಗೊಂಡು ಪಕ್ಷದ ತತ್ವ-ಸಿದ್ಧಾಂತಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ 87 ವರ್ಷ ವಯಸ್ಸಿನ ಹಿರಿಯ ನಾಯಕರೊಬ್ಬರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದ ಅವರು, ಇಂದಿಗೂ ಬೀದಿಗಿಳಿದು ಜಾಗೃತಿ ಮೂಡಿಸಲು ಮುಂದಾಗುವ ಇಂತಹ ನಿಷ್ಠಾವಂತ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸುವ ಮೂಲಕ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬಿದರು.
