State

ಸಿಎಂ ರಾಜಕೀಯ ಭದ್ರತೆಗಾಗಿ ಸಭೆ ಕರೆದಿಲ್ಲ… ವಿಪಕ್ಷಗಳಿಗೆ ತಮ್ಮ ಜವಾಬ್ದಾರಿ ಅರ್ಥವಾಗದಾಗಿದೆ; ಶಾಸಕ ಸವದಿ

Share

ಇಂದು ಮುಖ್ಯಮಂತ್ರಿಗಳು ಕರೆದಿರುವುದು ಕೇವಲ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಾಗಿದ್ದು, ಇದು ಯಾವುದೇ ರಾಜಕೀಯ ಭದ್ರತೆಗಾಗಿ ಅಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಸಚಿವ ನಾಗೇಂದ್ರ ಅವರ ಮೇಲಿನ ಕೇವಲ ಆರೋಪಗಳು ಇನ್ನೂ ಸಾಬೀತಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲೋಕಾಯುಕ್ತ ವರದಿ ಬಂದಿದ್ದು, ಈ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಿದ್ದರೂ ವಿಪಕ್ಷಗಳು ಕೇವಲ ರಾಜಕಾರಣಕ್ಕಾಗಿ ಒಂದು ವಾರ ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪ್ರಸ್ತುತ ಬರವಿದ್ದರೂ ರೈತರ ಪರವಾಗಿ ಚಿಂತಿಸಿ ಚರ್ಚೆ ನಡೆಸುವ ಜವಾಬ್ದಾರಿ ವಿಪಕ್ಷಗಳಿಗೆ ಇಲ್ಲದಿರುವುದು ದುರದೃಷ್ಟಕರ ಎಂದು ಅವರು ಆಕ್ರೋಶ ಹೊರಹಾಕಿದರು.

ಮುಂದುವರೆದು, ಇಂದು ಮುಖ್ಯಮಂತ್ರಿಗಳು ಕರೆದಿರುವುದು ಕೇವಲ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಾಗಿದ್ದು, ಇದು ಯಾವುದೇ ರಾಜಕೀಯ ಭದ್ರತೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿ ಜಿಲ್ಲೆಯ ಸಮಸ್ಯೆಗಳನ್ನು ಆಲಿಸಿ, ಲಭ್ಯವಿರುವ ಹಣಕಾಸಿನ ಆಧಾರದ ಮೇಲೆ ಸೂಕ್ತ ಅನುದಾನ ಬಿಡುಗಡೆ ಮಾಡಲು ಸಿಎಂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಇನ್ನು ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷರು ಭಾಗವಹಿಸಿರುವುದನ್ನು ಸಮರ್ಥಿಸಿಕೊಂಡ ಸವದಿ, ತಮ್ಮ ಬಳಿ ಬಂದ ಸಾರ್ವಜನಿಕರ ಬೇಡಿಕೆಗಳನ್ನು ಸಲ್ಲಿಸಲು ಅವರು ಬಂದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿರುಗೇಟು ನೀಡಿದರು.

Tags:

error: Content is protected !!