Belagavi

ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿದ ಐಕಾನಿಕ್ ‘ಕೈನಟಿಕ್’ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಲಾಂಚ್ ಆಯ್ತು ನೂತನ ‘Kinetic 

Share

ಒಂದು ಕಾಲದಲ್ಲಿ ಭಾರತದ ಪ್ರತಿಯೊಬ್ಬ ಯುವಕರ ಮೊದಲ ಆಯ್ಕೆಯಾಗಿದ್ದ ಐಕಾನಿಕ್ ‘ಕೈನಟಿಕ್’ ಈಗ ಹೊಸ ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ರೂಪದಲ್ಲಿ ಮತ್ತೆ ರಸ್ತೆಗಿಳಿಯಲು ಸಿದ್ಧವಾಗಿದೆ. ಹೌದು, ಬೆಳಗಾವಿಯ ‘ಬಿ. ಎಫ್. ಮತ್ತಿಕೊಪ್ ಮೋಟಾರ್ಸ್’ ನೂತನ ಶೋರೂಂನಲ್ಲಿ ಪ್ರಸಿದ್ಧ ಬ್ರ್ಯಾಂಡ್‌ನ ‘ಕೈನಟಿಕ್ DX’ ಎಲೆಕ್ಟ್ರಿಕ್ ಸ್ಕೂಟರ್ ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ವಾಹನ ಪ್ರಿಯರ ಗಮನ ಸೆಳೆಯುತ್ತಿದೆ.”

ಭಾರತೀಯ ರಸ್ತೆಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಕೈನಟಿಕ್ ಸಂಸ್ಥೆಯು ಇದೀಗ ಆಧುನಿಕ ಯುಗದಲ್ಲಿ ಹೊಸ ರೂಪ ಹಾಗೂ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಮರುಪ್ರವೇಶ ನೀಡಿದೆ. ನಗರದ ಚರ್ಕಾ ಮೆಸ್ ಹತ್ತಿರವಿರುವ ಎಸ್.ಪಿ. ಆಫೀಸ್ ರಸ್ತೆಯ ಮತ್ತಿಕೊಪ್ ಬಿಲ್ಡಿಂಗ್‌ನಲ್ಲಿರುವ ‘ಬಿ. ಎಫ್. ಮತ್ತಿಕೊಪ್ ಮೋಟರ್ಸ್’ ಶೋರೂಂನಲ್ಲಿ ಪ್ರಸಿದ್ಧ ಕೈನಟಿಕ್ ಸಂಸ್ಥೆಯ ನೂತನ ‘ಕೈನಟಿಕ್ DX’ (Kinetic DX) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅದ್ಧೂರಿಯಾಗಿ ಬಿಡುಗಡೆಗೊಳಿಸಲಾಯಿತು. ಹಿಂದೆ ದೇಶಾದ್ಯಂತ ಧೂಳೆಬ್ಬಿಸಿದ್ದ ಕೈನಟಿಕ್ ಹೊಂಡಾ ಪೆಟ್ರೋಲ್ ಸ್ಕೂಟರ್‌ನಂತೆಯೇ, ಹೊಸ ಯುವ ಪೀಳಿಗೆಯ ಅಗತ್ಯಗಳಿಗೆ ತಕ್ಕಂತೆ ಗಟ್ಟಿಮುಟ್ಟಾದ ಮೆಟಲ್ ಬಾಡಿ ಹಾಗೂ ರನ್ನಿಂಗ್ ಎಲ್ಇಡಿ ಹೆಡ್‌ಲೈಟ್‌ನೊಂದಿಗೆ ಈ ಹೊಸ ಇವಿ ಸ್ಕೂಟರ್ ಅನ್ನು ರೂಪಿಸಲಾಗಿದೆ.

ಕಲಬುರಗಿಯ ಯಶಸ್ಸಿನ ನಂತರ ಕರ್ನಾಟಕದಲ್ಲಿ ಆರಂಭಗೊಂಡ ಸಂಸ್ಥೆಯ 2ನೇ ನೂತನ ಶೋರೂಂನಲ್ಲಿ ಈ ಹೊಸ ಸ್ಕೂಟರ್ ಅನ್ನು ಬೆಳಗಾವಿ ಹಾಗೂ ಹುಬ್ಬಳ್ಳಿ ಮಾರುಕಟ್ಟೆಗೆ ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಗಿದ್ದು, ‘DX’ ಮತ್ತು ‘DX Plus’ ಎಂಬ ಎರಡು ಆಕರ್ಷಕ ವೇರಿಯೆಂಟ್‌ಗಳಲ್ಲಿ ಲಭ್ಯಗೊಳಿಸಲಾಗಿದೆ. ಈ ಸ್ಕೂಟರ್ ತಾಂತ್ರಿಕವಾಗಿ ಹಲವು ಸುಧಾರಿತ ಫೀಚರ್ಸ್‌ಗಳನ್ನು ಹೊಂದಿದ್ದು, ಕೀ-ರಹಿತ 4-ಡಿಜಿಟ್ ‘Easy Key’ ಪಾಸ್‌ವರ್ಡ್ ಸಷ್ಟಮ್, 37 ಲೀಟರ್ ವಿಶಾಲವಾದ ಬೂಟ್ ಸ್ಪೇಸ್, ಆಟೋಮ್ಯಾಟಿಕ್ ‘Easy Flip’ ಫುಟ್‌ಸ್ಟೆಪ್, ಕ್ರೂಸ್ ಕಂಟ್ರೋಲ್ ಹಾಗೂ ಪ್ರತ್ಯೇಕವಾಗಿ ಕೊಂಡೊಯ್ಯುವ ಅಗತ್ಯವಿಲ್ಲದ ಇನ್‌ಬಿಲ್ಟ್ ಚಾರ್ಜಿಂಗ್ ವೈರ್ ಸೌಲಭ್ಯವನ್ನು ಒಳಗೊಂಡಿದೆ.


ಬಿ. ಎಫ್. ಮತ್ತಿಕೊಪ್ಪ ಮೋಟರ್ಸ್ ಡೀಲರ್ ಪ್ರಿನ್ಸಿಪಲ್, ಆದರ್ಶ ಮತ್ತಿಕೊಪ್ಪ ಅವರು ಕಲಬುರಗಿಯ ನಂತರ ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಎರಡನೇ ಶೋರೂಂ ನಿರ್ಮಿಸಲಾಗಿದೆ. ಹಳೆಯ ಕೈನಟಿಕ್ ಬ್ರ್ಯಾಂಡ್ ಮೇಲಿರುವ ಅದೇ ನಂಬಿಕೆಯನ್ನು ಒದಗಿಸುತ್ತಾ, ನೂತನ Kinetic DX ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬೆಳಗಾವಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲಿದ್ದು, ಪ್ರತಿಯೊಬ್ಬರೂ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತೇನೆ.


ತಾಂತ್ರಿಕ ಕ್ಷಮತೆಯಲ್ಲಿ ಅತ್ಯಂತ ಶಕ್ತಿಶಾಲಿಯಾಗಿರುವ ಈ ಕೈನಟಿಕ್ DX ಸ್ಕೂಟರ್ ಕೇವಲ 4 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗಲಿದ್ದು, ಒಂದೇ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ಗೂ ಹೆಚ್ಚಿನ ಮೈಲೇಜ್ ನೀಡುತ್ತದೆ. 1 ಮಾದರಿಯಲ್ಲಿ 5 ವೈವಿಧ್ಯಮಯ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ನೂತನ ಇವಿ ಸ್ಕೂಟರ್‌ನ ಬಿಡುಗಡೆ ಕಾರ್ಯಕ್ರಮದಲ್ಲಿ ಮ್ಯಾನೇಜ್‌ಮೆಂಟ್ ನಿರ್ವಾಹಕರಾದ ಮನೋಜ್‌ಕುಮಾರ್ ಎಂ., ಆದರ್ಶ್ ಎಂ. ಹಾಗೂ ರಾಜಶೇಖರ್ ಎಂ. ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಶುಭ ಹಾರೈಸಿದರು.

Tags:

error: Content is protected !!