Belagavi

ಬಾಮಾ ಸಂಸ್ಥೆಯಿಂದ ಫೋರ್ಟ್ ರಸ್ತೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Share

ಬೆಳಗಾವಿ ಆಟೋಮೊಬೈಲ್ ಮರ್ಚೆಂಟ್ಸ್ ಅಸೋಸಿಯೇಷನ್ (ಬಾಮಾ) ವತಿಯಿಂದ ನಗರದ ಫೋರ್ಟ್ ರಸ್ತೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶರದ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಓಂ ಪ್ರಕಾಶ್ ವೈಷ್ಣವ್ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಬಳಿಕ ಬಾಮಾ ಸಭಾಂಗಣದಲ್ಲಿ ಆಟೋಮೊಬೈಲ್ ಡೀಲರ್‌ಗಳ ಮಹತ್ವದ ಸಭೆ ಜರುಗಿತು. ಸಭೆಯಲ್ಲಿ ಉದ್ಯಮಿಗಳು ಎದುರಿಸುತ್ತಿರುವ ಸಣ್ಣಪುಟ್ಟ ಸಮಸ್ಯೆಗಳು ಹಾಗೂ ಭವಿಷ್ಯದ ವ್ಯಾಪಾರ ವಹಿವಾಟಿನ ಕುರಿತು ವಿವರವಾಗಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಅಧ್ಯಕ್ಷ ಶರದ್ ಪಾಟೀಲ್, ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ವರ್ತಕರ ಸಮಸ್ಯೆಗಳಿಗೆ ಸ್ಪಂದಿಸಿದ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ನಗರ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರಿಗೆ ಧನ್ಯವಾದ ಅರ್ಪಿಸಿದರು. ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾದಲ್ಲಿ ಸಂಸ್ಥೆಯನ್ನು ಸಂಪರ್ಕಿಸುವಂತೆ ಅಭಯ ನೀಡಿದ ಅವರು, ಕಾರ್ಯಕ್ರಮದ ಜವಾಬ್ದಾರಿ ಹೊತ್ತ ಸಮರ್ಥ ಖುಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಮರುದ್ದೀನ್ ಸೌದಾಗರ್, ಮಾಜಿ ಅಧ್ಯಕ್ಷ ಫಿರೋಜ್ ಖಾನ್, ಮಾಜಿ ಕಾರ್ಯದರ್ಶಿ ಮಂಜೀತ್ ಸಿಂಗ್ ಕೊಹ್ಲಿ, ವಹಾಬ್, ಅಮ್ಜದ್, ಸುಹಾಸ್ ಪಾಟೀಲ್, ಶ್ಯಾಮ್ ಧಾಮೂಣೆ, ವಿಲ್ಸನ್, ಶಂಭು, ಗೋಪಾಲ್ ಪ್ರಜಾಪತ್, ವಿಶಾಲ್ ಪಾಟೀಲ್, ಸಂಜಯ್ ಮಾಸೇಕರ್ ಹಾಗೂ ಅರುಣ್ ತಾಪಸ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!