Khanapur

ಖಾನಾಪುರ ತಾಲ್ಲೂಕಿನ ಹಕ್ಕಿ ಪಕ್ಕಿ ಆದಿವಾಸಿ ಜನಾಂಗದಿಂದ ವಿಶೇಷ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

Share

ಖಾನಾಪುರ ತಾಲ್ಲೂಕಿನ ಹತ್ತರಗುಂಜಿ ಹೊರವಲಯದಲ್ಲಿ ವಾಸವಿರುವ ಹಕ್ಕಿ ಪಕ್ಕಿ ಆದಿವಾಸಿ ಬುಡಕಟ್ಟು ಜನಾಂಗದ ಮಕ್ಕಳು, ಮಹಿಳೆಯರು ಹಾಗೂ ಯುವಕರು ಕೂಡಿಕೊಂಡು ತಮ್ಮದೇ ಶೈಲಿಯಲ್ಲಿ ವಿಶೇಷವಾಗಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಯೋಜಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಹಕ್ಕಿ ಪಕ್ಕಿ ಆದಿವಾಸಿ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಮುಂದೆ ಬರಬೇಕು ಹಾಗೂ ಯುವಕರು ತಮ್ಮ ಸ್ವಂತ ಉದ್ಯೋಗ ಸೃಷ್ಟಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸ್ವತಂತ್ರವಾಗಿ ಬದುಕಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ಚಲವಾದಿ, ಗ್ರಾಮ ಪಂಚಾಯತ್ ಸದಸ್ಯ ರವಿ ಮಾದರ, ಮಾರುತಿ ಕಾಂಬಳೆ, ದಯಾನಂದ ಹಕ್ಕಿ ಪಕ್ಕಿ, ಕುಮಾರ ಆದಿವಾಸಿ, ವಾಣಿಶ್ರೀ ಆದಿವಾಸಿ, ಸೋನು ಹಕ್ಕಿ ಪಕ್ಕಿ , ನವರತ್ನ ಆದಿವಾಸಿ, ಹಾಗೂ ಸಂಘಟನೆಯ ಕಾರ್ಯಕರ್ತರು ಮತ್ತು ಹಕ್ಕಿ ಪಕ್ಕಿ ಆದಿವಾಸಿ ಜನಾಂಗದ ಸಾರ್ವಜನಿಕರು ಉಪಸ್ಥಿತರಿದ್ದರು.

Tags:

error: Content is protected !!