Belagavi

ಬೆಳಗಾವಿ: 75 ವರ್ಷದ ವೃದ್ಧ ಬಾಬುರಾವ್ ನಾನಾ ಪಾಟೀಲ್ ಕಾಣೆ; ಸುಳಿವು ಸಿಕ್ಕರೆ ತಕ್ಷಣ ಸಂಪರ್ಕಿಸಿ!

Share

“ಬೆಳಗಾವಿ ತಾಲೂಕಿನ ಹಿಂಡಲಗಾ – ಸುಳಗಾ ನಿವಾಸಿ, 75 ವರ್ಷದ ವೃದ್ಧ ಬಾಬುರಾವ್ ನಾನಾ ಪಾಟೀಲ್ ಅವರು ಕಳೆದ ಆಗಸ್ಟ್ 12 ರಿಂದ ಕಾಣೆಯಾಗಿದ್ದಾರೆ. ಹೊಲಕ್ಕೆ ಗವತ್ತು ತರಲು ಹೋದವರು ಇದುವರೆಗೂ ಮನೆಗೆ ಮರಳದಿರುವುದರಿಂದ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದಾರೆ. ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕರೆ ತಕ್ಷಣವೇ ನೀಡಿರುವ ಸಂಪರ್ಕ ಸಂಖ್ಯೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

ಬೆಳಗಾವಿ ತಾಲೂಕಿನ ಹಿಂಡಲಗಾ – ಸುಳಾಗಾ ನಿವಾಸಿಯಾಗಿರುವ 75 ವರ್ಷದ ಬಾಬುರಾವ್ ನಾನಾ ಪಾಟೀಲ್ ಅವರು ಆಗಸ್ಟ್ 12, 2026 ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಸೈಕಲ್ ಮೇಲೆ ಜಾನುವಾರುಗಳಿಗೆ ಹುಲ್ಲು ತರಲು ತೆರಳಿದ್ದರು. ಸೈಕಲ್ ಮೇಲೆ ಕಟ್ಟುಗಳನ್ನು ಕಟ್ಟಿಕೊಂಡು ಹೊರಟಿದ್ದ ಇವರು, ಹೊಲದ ಕೆಲಸದ ಬಟ್ಟೆ ಹಾಗೂ ಹಾಫ್ ಪ್ಯಾಂಟ್ ಧರಿಸಿದ್ದಾರೆ. ವಯೋಸಹಜವಾಗಿ ಕೆಲವೊಮ್ಮೆ ದಾರಿ ಮರೆತು ಮನೆಗೆ ಹೋಗುವ ದಿಕ್ಕು ತಿಳಿಯದೆ ಗೊಂದಲಕ್ಕೊಳಗಾಗುವ ಸಮಸ್ಯೆಯಿಂದ ಬಳಲುತ್ತಿರುವ ಇವರು, ಬೆಳಗಾವಿ ನಗರ ಅಥವಾ ಸುತ್ತಮುತ್ತಲ ಪ್ರದೇಶಕ್ಕೆ ತಲುಪಿರುವ ಸಾಧ್ಯತೆಯಿದೆ. ಬುಧವಾರ ಸಂಜೆ ಕ್ಯಾಂಪ್ ಪ್ರದೇಶ, ಅಂಗಡಿ ಕಾಲೇಜು ಹತ್ತಿರ, ಮಹಾದೇವ ದೇವಸ್ಥಾನ ಹಾಗೂ ಕಾಂಗ್ರೆಸ್ ರಸ್ತೆ ಭಾಗದಲ್ಲಿ ಇವರನ್ನು ಹೋಲುವ ವ್ಯಕ್ತಿ ಕಂಡುಬಂದಿದ್ದರು ಎನ್ನಲಾಗಿದ್ದು, ಹುಡುಕಾಟ ನಡೆಸಿದರೂ ಇನ್ನೂ ಯಾವುದೇ ನಿಖರ ಸುಳಿವು ಸಿಕ್ಕಿಲ್ಲ. ಈ ವೃದ್ಧರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ದಯವಿಟ್ಟು ಹೆಚ್.ಇ.ಆರ್.ಎಫ್. ರೆಸ್ಕ್ಯೂ ಟೀಮ್ (H.E.R.F Rescue Team Belagavi) ಮೊಬೈಲ್ ಸಂಖ್ಯೆ 9922899500 ಗೆ ತಕ್ಷಣವೇ ಕರೆ ಮಾಡಿ ಮಾಹಿತಿ ನೀಡಿ ನೆರವಾಗಬೇಕಾಗಿ ವಿನಂತಿಸಲಾಗಿದೆ

Tags:

error: Content is protected !!