Chikkodi

ಅತಿಯಾದ ಭಾರ ತುಂಬಿದ್ದ ಲಾರಿ ಢಿಕ್ಕಿ; ಕುಸಿದುಬಿದ್ದ ಬೃಹತ್ ಹೈಟ್ ಬ್ಯಾರಿಯರ್!

Share

ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾಣ ಸಮೀಪದ ಮೇಲ್ಸೇತುವೆ ಬಳಿ ಕಬ್ಬಿಣದ ತಡೆಗೋಡೆ (ಹೈಟ್ ಬ್ಯಾರಿಯರ್) ಕುಸಿದುಬಿದ್ದು ಟ್ರಕ್ ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.

ನಿಯಮ ಮೀರಿ ಅತಿಯಾದ ಎತ್ತರ ಹಾಗೂ ಭಾರದ ಸರಕು (ಓವರ್‌ಲೋಡ್) ಹೊತ್ತು ಸಾಗುತ್ತಿದ್ದ ಟ್ರಕ್, ಎತ್ತರದ ವಾಹನಗಳ ನಿಯಂತ್ರಣಕ್ಕಾಗಿ ಅಳವಡಿಸಲಾಗಿದ್ದ ಕಬ್ಬಿಣದ ಬ್ಯಾರಿಯರ್‌ಗೆ ಜೋರಾಗಿ ಢಿಕ್ಕಿ ಹೊಡೆದಿದೆ.ಢಿಕ್ಕಿಯ ರಭಸಕ್ಕೆ ಬ್ಯಾರಿಯರ್ ನೇರವಾಗಿ ಟ್ರಕ್‌ನ ಕ್ಯಾಬಿನ್ ಮೇಲೆ ಬಿದ್ದಿದ್ದರಿಂದ ವಾಹನದ ಮುಂಭಾಗ ಜಖಂಗೊಂಡಿದ್ದು, ಭಾರಿ ಆರ್ಥಿಕ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬ್ಯಾರಿಯರ್ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ನಿಪ್ಪಾಣಿ-ಮುಧೋಳ ಮಾರ್ಗದ ಎರಡೂ ಬದಿಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ನಾಗರಿಕರು ಹಾಗೂ ಆಡಳಿತ ಮಂಡಳಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತಡೆಗೋಡೆಯನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

Tags:

error: Content is protected !!