Belagavi

ಬೆಳಗಾವಿಯಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ

Share

ಬೆಳಗಾವಿಯ ಎಚ್.ಡಿ. ಕುಮಾರಸ್ವಾಮಿ ಬಡಾವಣೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ಶಿವಾಲಯದಲ್ಲಿ ವಿ.ಜಿ. ನೀರಲಗಿಮಠ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿದೆ. ಬಡಾವಣೆಯ ಅಭಿವೃದ್ಧಿ ಹಾಗೂ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಶ್ರಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬೆಳಗಾವಿಯ ಎಚ್.ಡಿ. ಕುಮಾರಸ್ವಾಮಿ ಬಡಾವಣೆಯ ಶಿವಾಲಯದಲ್ಲಿ ಆಯೋಜಿಸಲಾಗಿದ್ದ ಈ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥಾಪಕ ಸದಸ್ಯರಾದ ರುದ್ರಪ್ಪ ಬೇತೂರ, ಯೋಗೇಶ್ ತಳವಾರ ಹಾಗೂ ಪಂಚ ಕಮಿಟಿ ಅಧ್ಯಕ್ಷ ಅರವಿಂದ್ ಜೋಶಿ ಸಂಘದ ಕಾರ್ಯಪ್ರಗತಿಯನ್ನು ಪ್ರಶಂಸಿಸಿದರು.

ಆರಂಭದಲ್ಲಿ ಕಾರ್ಯದರ್ಶಿ ಸಿ. ಬಿ. ಸಂಗೊಳ್ಳಿ ಸ್ವಾಗತಿಸಿ ವರದಿ ವಾಚಿಸಿದರೆ, ಹಿರಿಯರಾದ ವೀರಣ್ಣ ಕಲ್ಲೋಳ್ಳಿ ಸಂಘದ ಧ್ಯೇಯ ಧೋರಣೆಗಳನ್ನು ವಿವರಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ವಿ.ಜಿ. ನೀರಲಗಿಮಠ, ಪ್ರತಿಯೊಬ್ಬ ಸದಸ್ಯರ ಯೋಗಕ್ಷೇಮ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಸಹಕಾರದಿಂದ ಬಗೆಹರಿಸಿಕೊಳ್ಳೋಣ ಎಂದು ಭರವಸೆ ನೀಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಾ ಹಂದಿಗುಂದ, ಕೆಂಪಣ್ಣ ಕೊಣ್ಣೂರ, ಬಿ.ಡಿ. ಹುಕ್ಕೇರಿಮಠ, ಮಲ್ಲಿಕಾರ್ಜುನ ಚಚಡಿ, ಬಿ. ಎಚ್. ವಿನಾಯಕ, ಸೋಮಶೇಖರ ಭೋಸಲೆ, ಜಯಶ್ರೀ ತಳವಾರ, ಹೇಮಾ ಶೆಟ್ಟಿ ಹಾಗೂ ಎಸ್. ಸಿ. ಗಂಗಾಪುರ ಉಪಸ್ಥಿತರಿದ್ದು, ಕೊನೆಯಲ್ಲಿ ಎಸ್. ಸಿ. ಗಂಗಾಪುರ ವಂದನಾರ್ಪಣೆ ಸಲ್ಲಿಸಿದರು.

Tags:

error: Content is protected !!