ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ಧಾರೆ. ಸಿಜೆಪಿ ಪ್ರತಿಭಟನೆ ಹಾಗೂ ಪ್ರತಿಪಕ್ಷಗಳ ಭಾರಿ ಪ್ರತಿರೋಧದ ಹಿನ್ನೆಲೆಯಲ್ಲಿ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಈ ಬಗ್ಗೆ ಧರ್ಮೇಂದ್ರ ಪ್ರಧಾನ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಅವರು ಸುದೀರ್ಘವಾದ ವಿವರಣೆಯನ್ನೂ ನೀಡಿದ್ದಾರೆ.
ನನ್ನ ಯುವ ಸ್ನೇಹಿತರೇ, ನಾನು ಕಳೆದ 4 ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಣ ಸುಧಾರಣೆಗಾಗಿ ಸಮರ್ಪಿಸಿಕೊಂಡಿದ್ದೇನೆ. ಒಂದು ಬಲಿಷ್ಠ, ಸಮಗ್ರ ಮತ್ತು ದೂರದೃಷ್ಟಿ ಶಿಕ್ಷಣ ವ್ಯವಸ್ಥೆಯೇ ಒಂದು ಬಲಿಷ್ಠ ರಾಷ್ಟ್ರದ ಅಡಿಪಾಯವಾಗುತ್ತದೆ ಎಂಬುದು ನನ್ನ ಸದಾ ನಂಬಿಕೆಯಾಗಿದೆ. ನಾನು ದೇಶದ ಯುವಕರ ಆಕಾಂಕ್ಷೆಗಳು, ಭಾವನೆಗಳು ಮತ್ತು ಅವರ ನ್ಯಾಯಯುತ ಅಪೇಕ್ಷೆಗಳನ್ನು ಗೌರವಿಸುತ್ತೇನೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮೆಲ್ಲರ ರಾಜಕೀಯ ಮತ್ತು ಸಾಮಾಜಿಕ ಜೀವನದ ನೈತಿಕ ಸಂಕಲ್ಪವಾಗಿದೆ. ಆದರ್ಶಪ್ರಾಯರಾದ ಪ್ರಧಾನಮಂತ್ರಿಯವರ ದೂರದೃಷ್ಟಿ ನಾಯಕತ್ವದಲ್ಲಿ ರಾಷ್ಟ್ರ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದಕ್ಕೆ ನಾನು ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
