ಪಂಜಾಬ್‌ನಲ್ಲಿ ಇದೇ ರೀತಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ, ಅಲ್ಲಿನ ಆಮ್ ಆದ್ಮ ಪಕ್ಷದ ಉಪಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ರಾಜೀನಾಮೆ ಪಡೆಯುತ್ತೇವೆ ಎಂದು ಹೇಳಿದ್ದರು. ಆ ಕುರಿತ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅಲ್ಲಿನ ಶಿಕ್ಷಣ ಸಚಿವರು ರಾಜೀನಾಮೆ ನೀಡಿದರಾ? ಕರ್ನಾಟಕದಲ್ಲೂ ಈ ರೀತಿಯ ಹಗರಣಗಳು ಸಾಕಷ್ಟಾಗಿವೆ. ಈಗಲೂ ನಮ್ಮ ರಾಜ್ಯದಲ್ಲಿ ಕೆಪಿಎಸ್‌ಸಿ ಕರ್ಮಕಾಂಡ ನಡೆದಿದೆ. ಇಲ್ಲಿನ ಸ್ಥಿತಿಗತಿ ಏನು?” ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಹಳೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಶ್ರೇಯಸ್ಸು ತೆಗೆದುಕೊಳ್ಳುವುದಿಲ್ಲ ಎಂದು ಮೊದಲೇ ಹೇಳಿದ್ದೇನೆ. ಈ ಹಿಂದೆಯೂ ಅನೇಕ ಬಾರಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. 2017ರಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಇವುಗಳ ಬಗ್ಗೆ ನಾನು ಉಲ್ಲೇಖ ಮಾಡುವುದಿಲ್ಲ ಎಂದರು. ಜತೆಗೆ ಕೇಂದ್ರ ಶಿಕ್ಷಣ ಸಚಿವರಾದ “ಧರ್ಮೇಂದ್ರ ಪ್ರದಾನ್ ಅವರ ರಾಜೀನಾಮೆ ವಿಚಾರವಾಗಿ ಜೆ.ಪಿ. ನಡ್ಡಾ ಅವರು ಮಾತುಕತೆ ನಡೆಸಿದ್ದಾರೆ. ಈ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿದೆ. ಎಲ್ಲ ವಿಷಯಗಳ ಚರ್ಚೆಯ ನಂತರ ರಾಜೀನಾಮೆ ವಿಚಾರವಾಗಿ ನಡ್ಡಾ ಅವರು ಮಾತನಾಡಲಿದ್ದಾರೆ, ಪ್ರತಿಭಟನೆಯಲ್ಲಿ ಆಮ್ ಆದ್ಮ ಪಕ್ಷದ ಪಾಲಿಕೆ ಸದಸ್ಯೆಯ ಪತಿ ಹಫೀಜ್ ಎನ್ನುವಂತಹ ವ್ಯಕ್ತಿ ಪಾಲ್ಗೊಂಡಿದ್ದಾನೆ. ಆತ ಮೂಲತಃ ಕ್ರಿಮಿನಲ್. ಪ್ರತಿಭಟನೆಯಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಕುರಿತು ಮಾತನಾಡುತ್ತಾರೆ.
ಮಹಿಳಾ ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ ಸೇರಿದಂತೆ ಅನೇಕ ಕೃತ್ಯಗಳು ಅಲ್ಲಿ ನಡೆದಿವೆ. ಹೀಗಾಗಿ ನಿಜವಾದ ವಿದ್ಯಾರ್ಥಿಗಳು ಇಂತವರಿಂದ ಎಚ್ಚರಿಕೆಯಿಂದ ಇರಬೇಕೆಂದು ನಾವು ವಿನಂತಿಸುತ್ತೇವೆ. ಈ ಬಗ್ಗೆ ಒಂದು ಸಮಿತಿಯನ್ನು ಕೂಡ ರಚಿಸಲಾಗಿದ್ದು, ಸಮಿತಿಯ ವರದಿಯೂ ಬಂದಿದೆ. ಇದರ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿದೆ, ನೀಟ್ ಪರೀಕ್ಷೆಗೆ 22 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ದೇಶಾದ್ಯಂತ 6 ಸಾವಿರ ಪರೀಕ್ಷಾ ಕೇಂದ್ರಗಳಿದ್ದವು. ಒಟ್ಟಾರೆಯಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬೈಟ್ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು.
