Dharwad

ಧಾರವಾಡದ ಶಿವಳ್ಳಿ ಗ್ರಾಮ ಸೇರಿ ನಾಲ್ಕು ಗ್ರಾಮಸ್ಥರಿಂದ ಪ್ರತಿಭಟನಾ ಪಾದಯಾತ್ರೆ…

Share

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿರುವ ಮಹಾನಗರ ಪಾಲಿಕೆಗೆ ಸೇರಿದ ಜಮೀನಿನಲ್ಲಿ ಬಿಪಿಸಿಎಲ್‌ನಿಂದ ಬಯೋಗ್ಯಾಸ್‌ ಘಟಕ ನಿರ್ಮಾಣವಾಗುತ್ತಿದ್ದು, ಇದಕ್ಕೆ ಶಿವಳ್ಳಿ, ಹೆಬ್ಬಳ್ಳಿ, ಸೋಮಾಪುರ, ಸುಳ್ಳ, ಮಾರಡಗಿ ಗ್ರಾಮಗಳ ಗ್ರಾಮಸ್ಥರು ವಿರೋಧಿಸಿ ಪ್ರತಿಭಟನಾ ಗಂಗ ಅದಯಾತ್ರೆ ನಡೆಸಿ ಗಂಗ ಅಲಿಕೆ ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದರು.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಮಹಾನಗರ ಪಾಲಿಕೆಗೆ ಸೇರಿದ 67 ಎಕರೆ ಜಮೀನು ಇದ್ದು, ಅದನ್ನು ಸಿಎಸ್‌ಆ‌ರ್ ಅಡಿ ಬಿಪಿಸಿಎಲ್ ಕಂಪೆನಿಯು ತೆಗೆದುಕೊಂಡು ಅಲ್ಲಿ ಕಸದಿಂದ ಬಯೋಗ್ಯಾಸ್‌ ತಯಾರು ಮಾಡುವ ಘಟಕ ಮಾಡಲಾಗುತ್ತಿದೆ. ಜತೆಗೆ ಅಲ್ಲಿ ಪ್ರಾಣಿಗಳ ಸಂತಾನಹರಣ ಚಿಕಿತ್ಸಾ ಘಟಕ, ತ್ಯಾಜ್ಯ ವಿಲೇವಾರಿ ಘಟಕಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಈ ಘಟಕಗಳು ಇಲ್ಲಿ ನಿರ್ಮಾಣವಾಗುವುದು ಬೇಡ, ಇದರಿಂದ ಗ್ರಾಮಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ. ಈ ಬಯೋಗ್ಯಾಸ್‌ ಘಟಕದಿಂದ ಕಲ್ಮಶ ಹೊಗೆ ಹೊರಸೂಸಿ ಮನುಷ್ಯರಷ್ಟೇ ಅಲ್ಲದೆ, ಬೆಳೆಗಳ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಯೋಗ್ಯಾಸ್ ಘಟಕ ಶಿವಳ್ಳಿಯಲ್ಲಿ ನಿರ್ಮಾಣವಾಗುವುದು ಬೇಡ ಎಂದು ಗ್ರಾಮಸ್ಥರು ಶಿವಳ್ಳಿ ಗ್ರಾಮದಿಂದ ಧಾರವಾಡದವರೆಗೂ ಪಾದಯಾತ್ರೆ ನಡೆಸಿದರು. ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದರು. ಅಲ್ಲದೆ ಬಯೋಗ್ಯಾಸ್ ಘಟಕ ಒಂದು ವೇಳೆ ನಿರ್ಮಾಣ ಮಾಡಿದೆ ಆದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು. ‌

Tags:

error: Content is protected !!