Belagavi

ಅಂಚೆ ನೌಕರರ 33ನೇ ಜಂಟಿ ದ್ವೈವಾರ್ಷಿಕ ಅಧಿವೇಶನ…

Share

ಬೆಳಗಾವಿಯಲ್ಲಿ ಜರುಗಿದ ಅಂಚೆ ನೌಕರರ 33ನೇ ಜಂಟಿ ದ್ವೈವಾರ್ಷಿಕ ಅಧಿವೇಶನದಲ್ಲಿ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಎಚ್. ವಿ. ರಾಜ್‌ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾರ್ಗೆಟ್‌ ರೀಚ್ ಆಗದಿದ್ದರೆ ಭಾನುವಾರವೂ ಮೀಟಿಂಗ್‌ಗೆ ಕರೆಯುವುದು ಹಾಗೂ ನೋಟಿಸ್ ನೀಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಈ ದೌರ್ಜನ್ಯದ ವಿರುದ್ಧ ಜುಲೈ 14 ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿಯ ನೆಹರು ನಗರದಲ್ಲಿರುವ ರಾಮದೇವ ಹೋಟೆಲ್ ಹಿಂಭಾಗದ ಕನ್ನಡ ಭವನದಲ್ಲಿ ಇಂದು ಬೆಳಗಾವಿಯಲ್ಲಿ ಇಂದು ಅಖಿಲ ಭಾರತ ಅಂಚೆ ನೌಕರರ ಹಾಗೂ ಗ್ರಾಮೀಣ ಅಂಚೆ ನೌಕರರ ಸಂಘಗಳ 33ನೇ ಜಂಟಿ ದ್ವೈವಾರ್ಷಿಕ ಅಧಿವೇಶನವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬೃಹತ್ ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಅಂಚೆ ಅಧೀಕ್ಷಕರಾದ ಬಸವರಾಜ ಎವಾಲಿಕಾರ ಮತ್ತು ಉಪ ಅಂಚೆ ಅಧೀಕ್ಷಕರಾದ ಶ್ರೀಕಾಂತ ಮುರನಾಳ ಅವರು ಭಾಗವಹಿಸಿ ನೌಕರರನ್ನುದ್ದೇಶಿಸಿ ಮಾತನಾಡಿದ್ದರು.

 

ಅತಿಥಿಗಳಾಗಿ ಎಚ್. ವಿ. ರಾಜ್‌ಕುಮಾರ್ ಅವರು, ಅಂಚೆ ಇಲಾಖೆಯ ಅಧಿಕಾರಿಗಳು ನೌಕರರ ಮೇಲೆ ಟಾರ್ಗೆಟ್‌ ರೀಚ್ ಆಗದಿದ್ದರೆ ಭಾನುವಾರವೂ ಮೀಟಿಂಗ್‌ಗೆ ಕರೆಯುವುದು ಹಾಗೂ ನೋಟಿಸ್ ನೀಡುವುದು ಸೇರಿದಂತೆ ಇಲಾಖಾ ಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಕಠಿಣ ಆದೇಶಗಳು ದೇಶದಲ್ಲಿ ಎಲ್ಲೂ ಇಲ್ಲ, ನಮ್ಮ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿ ಕಾಣಿಸುತ್ತಿವೆ ಎಂದ ಅವರು, ಅಧಿಕಾರಿಗಳಲ್ಲಿ ಮನುಷ್ಯತ್ವ ಮತ್ತು ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಎಲ್ಲಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ಸಿಹೆಚ್‌ಕ್ಯು (CHQ) ಮತ್ತು ವಲಯ ಸಂಘಟನೆಯ ನೇತೃತ್ವದಲ್ಲಿ ಜುಲೈ 14, 2026 ರಂದು ಬೆಂಗಳೂರಿನಲ್ಲಿ ಬೃಹತ್ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ನೌಕರರು ಬಸ್ ಹಾಗೂ ರೈಲುಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


ಇನ್ನೋರ್ವ ಗಣ್ಯರಾದ ರವಿ ಪಾಟೀಲ್ ಅವರು ಮಾತನಾಡಿ ಅಖಿಲ ಭಾರತ ಅಂಚೆ ನೌಕರರ ಸಂಘದ ವೇದಿಕೆಯಲ್ಲಿ ಮಾತನಾಡಿದ ರವಿ ಪಾಟೀಲ್ ಅವರು, ಹಿಂದೆ ಜಿಡಿಎಸ್ (GDS) ಸಿಬ್ಬಂದಿಗಳಿಗೆ ಯಾವುದೇ ಬೋನಸ್ ಸಿಗುತ್ತಿರಲಿಲ್ಲ, ಆದರೆ ಹಿರಿಯ ನಾಯಕರಾದ ವಿಜಯ್ ನಾಯರಿ ಅವರು ದೆಹಲಿ ಮಟ್ಟದಲ್ಲಿ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ನಡೆಸಿದ ಹೋರಾಟದ ಫಲವಾಗಿ ಇಂದು ಬೋನಸ್ ದೊರೆಯುತ್ತಿದೆ ಎಂದು ನೆನಪಿಸಿಕೊಂಡರು. ಇದೇ ರೀತಿ ಕಳೆದ 4-5 ವರ್ಷಗಳಿಂದ ಜಿಡಿಎಸ್‌ನಿಂದ ಪೋಸ್ಟ್’ಮನ್, ಪಿಎ, ಎಂಟಿಎಸ್ ಹಾಗೂ ಆರ್‌ಎಮ್‌ಎಸ್ ಹುದ್ದೆಗಳಿಗೆ ಸಿಬ್ಬಂದಿಗಳು ಬಡ್ತಿ ಪಡೆಯುತ್ತಿರುವುದರ ಸಂಪೂರ್ಣ ಶ್ರೇಯಸ್ಸು ಎಐಪಿಇಯು (AIPEU) ಸಂಘದ ಉತ್ತಮ ನಾಯಕರಿಗೆ ಸಲ್ಲುತ್ತದೆ ಎಂದರು. ಯಾವುದೇ ಕೆಲಸದ ಗುರಿ ಸಾಧನೆಗೆ ಒಂದು ನಿರ್ದಿಷ್ಟ ಮಿತಿ ಇರಬೇಕು ಮತ್ತು ಆ ಮಿತಿಯಲ್ಲೇ ಕಾರ್ಯನಿರ್ವಹಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಪ್ರತಿಪಾದಿಸಿದರು.

ಈ ಅಧಿವೇಶನದ ಜಂಟಿ ಅಧ್ಯಕ್ಷತೆಯನ್ನು ಅಂಚೆ ನೌಕರರ ಸಂಘದ ಪ್ರಮುಖರಾದ ಧರ್ಮೇಂದ್ರ ಆರ್. ಜ್ಯಾಯಿ, ಕಿಶೋರ ದೇಶಪಾಂಡೆ ಹಾಗೂ ರಾಮಾ. ಆನಂದಾಚೆ ಅವರು ವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ಗೌರವ ಸಮರ್ಪಣಾ ಸಮಾರಂಭವು ನಡೆದಿದ್ದು, ಹಲವು ಮಾಜಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಈ ವೇಳೆ ವಿ. ಕೃಷ್ಣಮೂರ್ತಿ, ರಾಘವೇಂದ್ರ ಹವಳೇರ, ಕೆ.ಎಸ್. ರುದ್ರೇಶ್, ಆರ್. ಬೈಲಪ್ಪ, ನವೀನಕುಮಾರ್, ಆರ್. ಮಂಜುನಾತ್, ಮಲ್ಲಪ್ಪ ನಧಾಪ್ ಇನ್ನುಳಿದವರು ಉಪಸ್ಥಿತರಿದ್ಧರು.

ಬೆಳಗಾವಿ ಲೋಕಸಭಾ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು, ಬ್ರಿಟಿಷರ ಕಾಲದಿಂದಲೂ ಅಂಚೆ ಇಲಾಖೆ ದೇಶಕ್ಕೆ ಅಪಾರ ಸೇವೆ ಸಲ್ಲಿಸುತ್ತಾ ಬಂದಿದ್ದು, ಅಂಚೆ ನೌಕರರು ದೇಶದ ಜೀವನಾಡಿಯಾಗಿದ್ದಾರೆ (Lifeline) ಎಂದು ಶ್ಲಾಘಿಸಿದರು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಸರ್ಕಾರದ ಗೃಹಲಕ್ಷ್ಮಿ ಯೋಜನೆ, ವಿವಿಧ ಬಾಂಡ್‌ಗಳು, ಸ್ಥಿರ ಠೇವಣಿ ಮತ್ತು ಇತರ ಯೋಜನೆಗಳನ್ನು ಪ್ರತಿ ಮನೆ-ಮನೆಗೆ ತಲುಪಿಸುವಲ್ಲಿ ಅಂಚೆ ನೌಕರರ ಶ್ರಮ ಮತ್ತು ಪ್ರಾಮಾಣಿಕತೆ ಹಿರಿದಾದುದು ಎಂದರು. ಇದೇ ವೇಳೆ ನೌಕರರ ವಿವಿಧ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅಂಚೆ ನೌಕರರ ಹಿತರಕ್ಷಣೆಗಾಗಿ ತಮ್ಮ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಎಂಒಎಸ್ ಎಂ.ಎಸ್. ಅನಿಲ್ ಕುಮಾರ್ ಅವರ ಗಮನಕ್ಕೆ ತಂದು, ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Tags:

error: Content is protected !!