Belagavi

ಬೆಳಗಾವಿಯಲ್ಲಿ ಮೋಹನ್ ಭಾಗವತ್’ರ ನೇತೃತ್ವದಲ್ಲಿ ಇಂದಿನಿಂದ ಆರ್.ಎಸ್.ಎಸ್. ಸಭೆ; ಸಭೆ ಹಿನ್ನೆಲೆ ಬೆಳಗಾವಿಯಲ್ಲಿ ಖಾಕಿ ಕೋಟೆ

Share

ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಅತ್ಯಂತ ಪ್ರಮುಖ ಹಾಗೂ ಮಹತ್ವದ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಆರಂಭಗೊಂಡಿದೆ. ಸಂಘದ ಶತಾಬ್ದಿ ವರ್ಷದ ಸಿದ್ಧತೆಗಳು ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಈ ಸಭೆ ನಡೆಯುತ್ತಿದೆ.

ಬೆಳಗಾವಿಯ ಅನಗೋಳದ ಸಂತ್ ಮೀರಾ ಶಾಲೆಯಲ್ಲಿ ಸರಸಂಘಚಾಲಕ ಮೋಹನ್ ಭಾಗವತ್‌ ಅವರ ನೇತೃತ್ವದಲ್ಲಿ ಇಂದಿನಿಂದ ಆರ್.ಎಸ್.ಎಸ್. ವಾರ್ಷಿಕ ಸಭೆ ಆರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಮಹತ್ವದ ಸಭೆಯಲ್ಲಿ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ದೇಶದ 11 ಕ್ಷೇತ್ರಗಳ 46 ಪ್ರಾಂತ ಪ್ರತಿನಿಧಿಗಳು ಹಾಗೂ 136ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಾಂತ ಪ್ರಚಾರಕರು ಭಾಗವಹಿಸಿದ್ದಾರೆ. ಆರ್.ಎಸ್.ಎಸ್. ಶಾಖಾ ಕಾರ್ಯದ ವಿಸ್ತರಣೆ ಮತ್ತು ಶತಾಬ್ದಿ ವರ್ಷದ ಕಾರ್ಯಯೋಜನೆಗಳ ಚರ್ಚೆಯ ಜೊತೆಗೆ, ಅಯೋಧ್ಯೆಯ ಹಣ ದುರ್ಬಳಕೆ ಆರೋಪ ಹಾಗೂ ಸಂಘದ ನೋಂದಣಿ ಪ್ರಶ್ನಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳ ಬಗ್ಗೆಯೂ ಇಲ್ಲಿ ಆಳವಾದ ಚರ್ಚೆ ನಡೆಯುವ ಸಾಧ್ಯತೆಯಿದೆ. ಸಭೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, 350ಕ್ಕೂ ಹೆಚ್ಚು ಪೊಲೀಸರ ನಿಯೋಜನೆ, ಡ್ರೋನ್ ಹಾರಾಟ ನಿಷೇಧ ಹಾಗೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿದ್ದು, ಮಾಧ್ಯಮ ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.

Tags:

error: Content is protected !!