Belagavi

ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಪ್ರತಿಷ್ಠಾಪಿಸಲು ಶ್ರೀರಾಮಸೇನೆ ಒತ್ತಾಯ

Share

ಸ್ವಾತಂತ್ರ್ಯ ವೀರ ವಿನಾಯಕ ಸಾವರ್ಕರ್ ಅವರಿಗೆ ಹಿಂಡಲಗಾ ಜೈಲಿನಲ್ಲಿದ್ದ ಭಾವ ಚಿತ್ರವನ್ನು ರಾಜ್ಯ ಸರಕಾರ ಪ್ರತಿಷ್ಠಾಪನೆ ಮಾಡಬೇಕು ಎಂದು ಶ್ರೀರಾಮ್ ಸೇನೆ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಬುಧವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜು.13 ಸ್ವಾತಂತ್ರ್ಯ ವೀರ ಬಿಡುಗಡೆಯಾದ ದಿನವೇ ಹಿಂಡಲಗಾ ಜೈಲಿನ ಎದುರೆ ಸಾವರ್ಕರ್ ಭಾವಚಿತ್ರ ಇಟ್ಟು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಸಾವರ್ಕರ್ ಭಾವಚಿತ್ರದ ಜೊತೆಗೆ ನಾಮಫಲಕ, ಅವರ ಜಯಂತಿ ಆಚರಿಸಬೇಕು. ವಿಮಾನ ನಿಲ್ದಾಣದಲ್ಲಿ ಸಾವರ್ಕರ್ ನಾಮಫಲಕ ಅಳವಡಿಸಬೇಕು. ಶಾಲಾ ಪಠ್ಯಪುಸ್ತಕದಲ್ಲಿ ಸಾವರ್ಕರ್ ಅವರ ಜೀವನವನ್ನು ಅಳವಡಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಸ್ವಾತಂತ್ರ್ಯ ವೀರ ವಿನಾಯಕ ಸಾವರ್ಕರ್ ಅಂಡಮಾನ್ ನಿಕೋಬಾರ್ ಜೈಲಿಗೆ ಹಾಕುವಾಗ ಸಮುದ್ರದಿಂದ ಹಾರಿದ ದಿನ ಐತಿಹಾಸಿಕ ದಿನ. ಸಾವರ್ಕರ್ ಅವರು 1915 ರಲ್ಲಿ ಭಾರತದ ನೆಹರು ಕೇಂದ್ರ ಸರಕಾರ ಹಿಂಡಲಗಾ ಜೈಲಿನಲ್ಲಿ ಮೂರು ತಿಂಗಳುಗಳ ಕಾಲ ಹಿಂಡಲಗಾದಲ್ಲಿ ಇಟ್ಟಿದ್ದರು ಎಂದರು.

ಕಾಂಗ್ರೆಸ್ ಸರಕಾರ ಕ್ರಾಂತಿಕಾರಿಗಳೊಂದಿಗೆ ನಿಂತಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್, ಸಾವರ್ಕರ್, ಶಾಂತಿಯ ಹೆಸರಿನಲ್ಲಿ ಗಾಂಧಿಜೀ ಅವರನ್ನು ಬಿಟ್ಟರೇ ಯಾರನ್ನು ಮುಂದೆ ತರಲಿಲ್ಲ. ಅಂದಿನ ದಿನದಲ್ಲಿ ಕಾಂಗ್ರೆಸ್ ಸರಕಾರ ಡಾ.ಅಂಬೇಡ್ಕರ್ ಅವರನ್ನು ಸೋಲಿಸುತ್ತಾರೆ. ಅವರು ಮೃತಪಟ್ಟ ಬಳಿಕ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ. ಈಗ ಅಂಬೇಡ್ಕರ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಬೈಟ್

ಈ ವೇಳೆ ವೆಂಕಟೇಶ ‌ಶಿಂಧೆ, ವಿನಯ ಅಂಬ್ರೋಳಿ, ಬಾಳು ಪವಾರ್, ಡಾ. ಸೋನಾಲಿ ಸರ್ನೋಬತ್ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Tags:

error: Content is protected !!