ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಎಸ್‌ಐಆರ್ ಕಾರ್ಯ ಧಾರವಾಡದಲ್ಲೂ ಮಂಗಳವಾರ ಅಧಿಕೃತವಾಗಿ ಆರಂಭಗೊಂಡಿದೆ.

ಹುಬ್ಬಳ್ಳಿಯಲ್ಲಿ ಬಿಎಲ್‌ಓಗಳು ಮನೆ, ಮನೆಗೆ ತೆರಳಿ ಮತಪಟ್ಟಿಯಲ್ಲಿ ಇರುವ ವ್ಯಕ್ತಿಗಳ ಹೆಸರುಗಳ ಪರಿಷ್ಕರಣೆ ಆರಂಭಿಸಿದ್ದಾರೆ.
ಮನೆ ಮನೆಗೆ ತೆರಳುತ್ತಿರುವ ಬಿಎಲ್‌ಓಗಳು ಮತದಾರರಿಗೆ ಎರಡು ಅರ್ಜಿಗಳನ್ನು ನೀಡಿ ಎರಡೂ ಅರ್ಜಿಗಳನ್ನು ತುಂಬಿ ಒಂದು ಅರ್ಜಿಯನ್ನು ಒಂದು ತಿಂಗಳೊಳಗಾಗಿ ತಮಗೆ ವಾಪಸ್ ನೀಡುವಂತೆ ಮನವರಿಕೆ ಮಾಡುತ್ತಿದ್ದಾರೆ.
ಮತದಾರರು ಅರ್ಜಿ ಫಾರ್ಮ್‌ಗಳನ್ನು ಭರ್ತಿ ಮಾಡಿದ ನಂತರ ಬಿಎಲ್‌ಓಗಳೇ ಅವುಗಳನ್ನು ಕಲೆಕ್ಟ್ ಮಾಡಲಿದ್ದಾರೆ. ಅರ್ಜಿ ನೀಡುತ್ತಿರುವ ಬಿಎಲ್‌ಓಗಳಿಗೆ ಮತದಾರರೂ ಸಹ ಒಳ್ಳೆಯ ಸ್ಪಂದನೆ ನೀಡುತ್ತಿದ್ದಾರೆ.
