ಗುಜರಾತನ ಗಾಂಧೀನಗರ ಐ ಐ ಟಿ ಯಲ್ಲಿ ಪ್ರೊಜೆಕ್ಟ್ ಸೈಂಟಿಸ್ಟ್ ಆಗಿ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಡಾ ಚೇತನ ಉರಬಿನಹಟ್ಟಿ ನೇಮಕಗೊಂಡಿದ್ದು, ಐ ಐ ಟಿ ಸಂಶೋಧನ ಮತ್ತು ಅಭಿವ್ರದ್ಧಿ ಡೀನ್ ಈ ನೇಮಕ ಕುರಿತು ಇದೇ ಜೂನ್ ೨೯ ರಂದು ಅಧಿಕ್ರತ ಆದೇಶ ಹೊರಡಿಸಿದ್ದಾರೆ.

ಪ್ರಸಕ್ತ ಕಾರ್ಯ ಭಾರವು ಭಾರತ ಸರ್ಕಾರದ ಅನುಸಂಧಾನ ರಾಷ್ಟೀಯ ಪೌಂಡೇಶನ್ ನ. ಪ್ರಮುಖ ಭಾಗವಾಗಿದ್ದು, ಇ ವ್ಹಿ ಯಲ್ಲಿ ಜಗತ್ತಿನಲ್ಲಿ ಹೆಚ್ಚಿನ ಸಾಧನೆಗೈದು ಸ್ವಾವಲಂಬಿಯಾಗಲು ಮಹಾ ಇ ವ್ಹಿ ಮಿಷನ್ ಅನ್ವಯ , ಇಲೆಕ್ಟ್ರಿಕ್ ವಾಹನಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶವಿದ್ದು, ಭಾರತದ ಹವಾಮಾನಕ್ಕೆ ಹೊಂದುವ ಬ್ಯಾಟರಿ ಮತ್ತು ಸೆಲ್ ಗಳ ಅಭಿವ್ರದ್ಧಿ, ಮೋಟಾರ್, ಕಂಟ್ರೋಲರ್ ತಂತ್ರಜ್ನಾನ ಮತ್ತು ವೇಗದ ಸ್ಮಾರ್ಟ್ ಇ ವ್ಹಿ ಚಾರ್ಜಿಂಗ್ ಒಳಗೊಂಡಿದ್ದು, ಈ ಎಲ್ಲ ಇ ವ್ಹಿ ಕ್ಷೇತ್ರಕ್ಕೆ ಅತ್ಯವಶ್ಯವಿರುವ ಪಾವರ್ ಇಲೆಕ್ಟ್ರಾನಿಕ್ಸ್ ಮತ್ತು ಮೋಟಾರ್ ಕಂಟ್ರೋಲರ್ಸ್ ಕುರಿತು ಹೆಚ್ಚಿನ ಸಂಶೋಧನೆ ಡಾ ಚೇತನ ಅವರು ಕೈಗೊಳ್ಳಲಿದ್ದಾರೆ.
ಚೇತನ ಅವರು ಕಳೆದ ೧೦ ವರ್ಷಗಳಿಂದ ಬೆಂಗಳೂರಿನ ಟಾಟಾ ಸಂಸ್ಥೆ ಯಾದ ಭಾರತೀಯ ವಿಜ್ಞಾನ ಸಂಸ್ಥೆಯ ಪಾವರ್ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಪಿ ಎಚ್ ಡಿ ಗಳಿಸಿದ್ದು, ಇವರ ಈ ನೇಮಕಾತಿಯು ಕುಂದರನಾಡಿನ ತಂತ್ರಜ್ನಾನ ಕ್ಷೇತ್ರ ಮತ್ತು ಶೈಕ್ಷಣಿಕ ವಲಯದಲ್ಲಿ ತೀವ್ರ ಹರ್ಷ ಮೂಡಿಸಿದೆ.
