Belagavi

ಎಸ್.ಐ.ಆರ್ ಪ್ರಕ್ರಿಯೆ; ಬೆಳಗಾವಿಯಲ್ಲಿ ಮರಾಠಿ ಅರ್ಜಿಗಾಗಿ ಪಟ್ಟು: ಚುನಾವಣಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಮರಾಠಿ ಭಾಷಿಕರು!!!!

Share

ಬೆಳಗಾವಿ ಗಡಿಭಾಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಭಾಷಾ ವಿವಾದ ಮತ್ತೊಮ್ಮೆ ತಾರಕಕ್ಕೇರಿದೆ. ಕನ್ನಡದ ಅರ್ಜಿಗಳನ್ನು ನಿರಾಕರಿಸಿ, ಅಧಿಕಾರಿಗಳನ್ನು ಎಂಇಎಸ್ ನಾಯಕರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿ ಸದ್ಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದ್ದು, ಬೆಳಗಾವಿಯ ಬಾಂದೂರ ಗಲ್ಲಿಯಲ್ಲಿ ಮನೆ ಮನೆಗೆ ತೆರಳಿ ಅರ್ಜಿ ವಿತರಿಸುತ್ತಿದ್ದ ಸಿಬ್ಬಂದಿ, ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮಾಜಿ ನಗರಸೇವಕ ಸುನೀಲ್ ಬಾಳೇಕುಂದ್ರಿ ಅವರಿಗೆ ಕನ್ನಡದ ಅರ್ಜಿಯನ್ನು ನೀಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಳೇಕುಂದ್ರಿ, ತಮಗೆ ಕನ್ನಡ ಭಾಷೆ ಬರುವುದಿಲ್ಲ ಎಂದಿದ್ದಲ್ಲದೆ, ಭಾಷಾ ಅಲ್ಪಸಂಖ್ಯಾತರ ನಿಯಮಾವಳಿಗಳ ಪ್ರಕಾರ ಮರಾಠಿ ಭಾಷೆಯ ಅರ್ಜಿಗಳನ್ನೇ ನೀಡಬೇಕು ಎಂದಿದ್ದಾರೆ..

ಪ್ರಸ್ತುತ ಕನ್ನಡದಲ್ಲಿ ಮಾತ್ರ ಅರ್ಜಿಗಳು ಲಭ್ಯ ಇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದಾಗ, ಅದನ್ನು ಸ್ವೀಕರಿಸಲು ನಿರಾಕರಿಸಿದ ಎಂಇಎಸ್ ನಾಯಕರು ಚುನಾವಣಾ ಸಿಬ್ಬಂದಿಯನ್ನು ಅರ್ಜಿಗಳ ಸಮೇತ ವಾಪಸ್ ಕಳುಹಿಸಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಮರಾಠಿ ಅರ್ಜಿಗಳನ್ನು ನೀಡಲಾಗಿತ್ತು ಎಂದು ನೆನಪಿಸಿದ ಅವರು, ಮರಾಠಿ ಅರ್ಜಿ ಸಿಗುವವರೆಗೂ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಗಡಿಭಾಗದ ಯಾವುದೇ ಮರಾಠಿ ಭಾಷಿಕರು ಕನ್ನಡದ ಅರ್ಜಿಗಳನ್ನು ಸ್ವೀಕರಿಸಬಾರದು ಎಂದು ಕರೆ ನೀಡಿದ್ದಾರೆ.

Tags:

error: Content is protected !!