ಖಾನಾಪುರ ತಾಲೂಕಿನ ಚಿಕ್ಕ ಅಂಗ್ರೊಳ್ಳಿ ಗ್ರಾಮದಲ್ಲಿ ಶಾಲಾ ದಲಿತ ಮಕ್ಕಳ ಮೇಲಿನ ಅಸ್ಪೃಶ್ಯತೆ ಆಚರಣೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಬಿ.ಡಿ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.


ಖಾನಾಪುರ ತಾಲೂಕಿನ ಚಿಕ್ಕ ಅಂಗ್ರೊಳ್ಳಿ ಗ್ರಾಮದಲ್ಲಿ ಮೊನ್ನೆಯಷ್ಟೇ ಸಾರ್ವಜನಿಕ ಸ್ಥಳದಲ್ಲಿ ಮಹಾಪ್ರಸಾದದ ಸಮಯದಲ್ಲಿ ದಲಿತ ಶಾಲಾ ಮಕ್ಕಳಿಗೆ ದೂರದಿಂದಲೇ ಊಟ ನೀಡಿ ಅಸ್ಪೃಶ್ಯತೆ ಆಚರಿಸಿದ ಅಮಾನವೀಯ ಕೃತ್ಯದ ವಿರುದ್ಧ ತಾಲೂಕಿನ ವಿವಿಧ ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ಸಂಬಂಧ ದಿನಾಂಕ 23/06/2026 ರಂದು ನಂದಗಡ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಬಿ.ಡಿ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಇದರಿಂದ ಕೆಲಕಾಲ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಡಿವೈಎಸ್ಪಿ ಹಾಗೂ ಉಪ ತಹಶೀಲ್ದಾರ್ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಬೃಹತ್ ಪ್ರತಿಭಟನೆಯಲ್ಲಿ ಮುಖಂಡರಾದ ರಾಜಶೇಖರ ಹಿಂಡಲಗಿ, ಉಮೇಶ್ ಕೋಲಕಾರ, ಶರದ್ ಹೊನ್ನನಾಯಕ, ರಾಯಪ್ಪ ಚಲವಾದಿ, ರಾಘವೇಂದ್ರ ಚಲವಾದಿ, ರಾಜು ಕಾಂಬಳೆ, ಈರಪ್ಪ ಮಾದರ, ಮಹಾಂತೇಶ ಪಾತ್ರದಾರ್, ದುರ್ಗಪ್ಪ ಚಲವಾದಿ, ಬಸವರಾಜ ಮಾದರ, ಪುಟ್ಟು ಹವನವರ, ರವಿ ಮಾದರ, ಶಶಿಧರ ನಾಯಕ್, ಕಲ್ಲಪ್ಪ ತಳವಾರ, ಪರಶುರಾಮ ಮಾದರ, ಉದಯ ತಳವಾರ, ಚಂದ್ರು ಮಾದರ, ಕಾರ್ತಿಕ್ ತಳವಾರ, ದಯಾನಂದ, ಮಾರುತಿ ಕಾಂಬಳೆ ಸೇರಿದಂತೆ ಸಾವಿರಾರು ದಲಿತ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
