ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು, ಐಷಾರಾಮಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿ ಮೂಲದ ಅಂತರಜಿಲ್ಲಾ ಖದೀಮನನ್ನು ಹೆಡೆಮುರಿ ಕಟ್ಟಿದ್ದಾರೆ.

ದಿನಾಂಕ 28/06/2026 ರಂದು ಬೆಳಗಾವಿಯ ವಿಟಿಯು ಕ್ರಾಸ್, ಜಾಂಬೋಟಿ-ಬೆಳಗಾವಿ ರಸ್ತೆಯ ಮಚ್ಚೆ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ಕೇಶವಾಪುರ ನಿವಾಸಿ ನಿಖಿಲ ಮೈಕಲ್ ಡೇವಿಡ್ (37) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಪಿಎಸ್‌ಐ ವಿ. ಡಿ. ಸರನಾಯಕ ಹಾಗೂ ಅವರ ಸಿಬ್ಬಂದಿ ವರ್ಗದವರು ಈ ಭರ್ಜರಿ ದಾಳಿ ನಡೆಸಿದ್ದು, ಆರೋಪಿಯಿಂದ 8,000 ರೂ. ಮೌಲ್ಯದ 168 ಗ್ರಾಂ ಗಾಂಜಾ, 7,00,000 ರೂ. ಮೌಲ್ಯದ ಹುಂಡೈ ವೆರ್ನಾ ಕಾರ್ ಹಾಗೂ 3,000 ರೂ. ಮೌಲ್ಯದ ಒನ್‌ಪ್ಲಸ್ ಮೊಬೈಲ್ ಸೇರಿದಂತೆ ಒಟ್ಟು 7,11,000 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮು.ಸಂ. 168/2026, ಕಲಂ 20(b)(ii)(A) ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದ್ದು, ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
