Khanapur

ಖಾನಾಪುರ: ಸ್ಟೇಷನ್ ರೋಡ್ ಬೂತ್‌ನಲ್ಲಿ ಮಗುವಿಗೆ ಹನಿ ಹಾಕುವ ಮೂಲಕ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದ ಇಸಾಕ್ ಖಾನ್ ಪಠಾಣ್

Share

ಖಾನಾಪುರ ಪಟ್ಟಣದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಯಶಸ್ವಿಯಾಗಿ ಜರುಗಿದೆ. ಪಟ್ಟಣದ ಲಕ್ಷ್ಮೀ ಮಂದಿರ ಸ್ಟೇಷನ್ ರೋಡ್‌ನಲ್ಲಿರುವ ಪೋಲಿಯೋ ಬೂತ್‌ನಲ್ಲಿ ಖಾನಾಪುರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಇಸಾಕ್ ಖಾನ್ ಪಠಾಣ್ ಅವರು ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು.

ಖಾನಾಪುರ ಪಟ್ಟಣದ ಲಕ್ಷ್ಮೀ ಮಂದಿರ ಸ್ಟೇಷನ್ ರೋಡ್ ಪೋಲಿಯೋ ಬೂತ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೋ ಲಸಿಕಾ ಕೇಂದ್ರಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್ ಭೇಟಿ ನೀಡಿ, ಪುಟಾಣಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಇಸಾಕ್ ಖಾನ್ ಪಠಾಣ್ ಅವರ ಸಮ್ಮುಖದಲ್ಲಿ ಲಸಿಕಾ ಪ್ರಕ್ರಿಯೆ ಸುಗಮವಾಗಿ ಆರಂಭಗೊಂಡಿದೆ, ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸದೇ ಇರುವ ಪೋಷಕರು ತಕ್ಷಣವೇ ಬೂತ್‌ಗೆ ಬಂದು ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಅಭಿಯಾನದ ಹಿನ್ನೆಲೆಯಲ್ಲಿ ಮುಸ್ಲಿಂ ನಿಂಗಾಪುರ ಗಲ್ಲಿ ಹಾಗೂ ಗೋಡೆಗಲ್ಲಿಯ ನಿವಾಸಿಗಳು ತಂತಮ್ಮ ಮಕ್ಕಳೊಂದಿಗೆ ಬೂತ್‌ಗೆ ಆಗಮಿಸಿ ಲಸಿಕೆ ಹಾಕಿಸುವ ಮೂಲಕ ಅತ್ಯುತ್ತಮ ಸಹಕಾರ ನೀಡಿದರು.

Tags:

error: Content is protected !!