ಮುಂಬೈನ ರಾಜ್ಯ ಮರಾಠಿ ವಿಕಾಸ ಸಂಸ್ಥೆ ಹಾಗೂ ಬೆಳಗಾವಿಯ ಛತ್ರಪತಿ ಶಾಹು ಪ್ರಕಾಶನ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಖೈರವಾಡದ ವಿದ್ಯಾರ್ಥಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಬೆಳಗಾವಿಯ ಟಿಳಕವಾಡಿ ಹೈಸ್ಕೂಲ್‌ನ ವಿದ್ಯಾರ್ಥಿಯಾದ ಈತ ದ್ವಿತೀಯ ಸ್ಥಾನ ಪಡೆಯುವ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.

ಬೆಳಗಾವಿಯ ಛತ್ರಪತಿ ಶಾಹು ಪ್ರಕಾಶನ ಮಂಡಳಿ ಹಾಗೂ ಮುಂಬೈನ ರಾಜ್ಯ ಮರಾಠಿ ವಿಕಾಸ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ (ಜೂನ್ 21) ಹಮ್ಮಿಕೊಳ್ಳಲಾಗಿದ್ದ ವಕ್ತೃತ್ವ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 10 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಬೆಳಗಾವಿಯ ಟಿಳಕವಾಡಿ ಹೈಸ್ಕೂಲ್‌ನ ವಿದ್ಯಾರ್ಥಿ ಹಾಗೂ ಖೈರವಾಡ ಗ್ರಾಮದ ಪರಶುರಾಮ್ ಕೊಲೇಕರ್ ಅವರ ಪುತ್ರನಾದ ಕುಮಾರ್ ಪುಷ್ಕರ್ ಪರಶುರಾಮ್ ಕೊಲೇಕರ್ ಮರಾಠಿ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಈ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಬೃಹನ್ಮಹಾರಾಷ್ಟ್ರ ಮಂಡಳಿಯ ನಿತಿನ್ ಕಪಿಲೇಶ್ವರ್ಕರ್, ಸಹ ಕೋಶಾಧಿಕಾರಿ ಪರಶುರಾಮ್ ಮಾಳಿ, ವಿಭಾಗೀಯ ಕಾರ್ಯದರ್ಶಿ ಹಾಗೂ ಪ್ರಬಂಧ ಕೇಂದ್ರದ ಮುಖ್ಯಸ್ಥ ಪ್ರಭಾಕರ್ ಹಲಗೇಕರ್, ಕುಮಾರ್ ಪಾಟೀಲ್, ಶಿವರಾಜ್ ಪಾಟೀಲ್, ವಿಲಾಸ್ ಪೆಡ್ನೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
