ಎಂ.ಇ.ಎಸ್. ಮತ್ತು ಶಿವಸೇನೆಯನ್ನು ಬ್ಯಾನ್ ಮಾಡಬೇಕು. ಬೆಳಗಾವಿಯ ಎಂ.ಇ.ಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಮನವಿ ಸ್ವೀಕರಿಸುವ ವೇಳೆ ಹಿಂದಿ ಭಾಷೆ ಬಳಸಿ ಮಾತನಾಡಿದ ಬೆಳಗಾವಿ ಡಿಸಿ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.


ಬೆಳಗಾವಿಯ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಿಂದ ರ್ಯಾಲಿಯ ಮೂಲಕ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ರಾಜ್ಯದ 2ನೇ ರಾಜಧಾನಿ. ಜೂನ್ 22 ರಂದು ಎಂ.ಇ.ಎಸ್.ನ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ವೇಳ ಕನ್ನಡ ಕಡ್ಡಾಯ ಪ್ರತಿಯನ್ನು ಹರಿದು ಹಾಕಿದ್ದಾರೆ. ಎಂ.ಇ.ಎಸ್ ಮತ್ತು ಶಿವಸೇನೆಯನ್ನು ಗಡಿ ಪಾರು ಮಾಡಬೇಕು. ಜಿಲ್ಲಾಧಿಕಾರಿಗಳು ಮನವಿ ಕೊಡಲು ಬಂದ ಎಂ.ಇ.ಎಸ್. ನವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಸಭೆ ಕರೆಯುವ ವಿಶ್ವಾಸವನ್ನು ನೀಡಿದ್ದಾರೆ. ಎಂಇಎಸ್ ನವರ ಮೇಲೆ ಗೌರವವಿದ್ದರೇ ಬೆಳಗಾವಿ ಡಿಸಿ ಮಹಾರಾಷ್ಟ್ರಕ್ಕೆ ಹೋಗಲಿ. ನಿಮಗೆ ಕರ್ನಾಟಕಕ್ಕೆ ಬರಲೂ ಯಾರೂ ಹೇಳಿಲ್ಲ. ಕಚೇರಿ ಹೊರಗೆ ಬಂದು ಹಿಂದಿ ಭಾಷೆ ಬಳಿಸಿ ಕನ್ನಡ ಭಾಷೆ ಬಳಸಿದ್ದು, ನಾಚಿಕೆಗೇಡು. ಬೆಳಗಾವಿ ಜಿಲ್ಲಾಧಿಕಾರಿಗಳು ಬೇರೆಡೆ ವರ್ಗಾವಣೆಯಾಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದು, ಮರಾಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳ ನಡೆಯನ್ನು ಖಂಡಿಸಿದ್ದು, ವಾಟಾಳ್ ನಾಗರಾಜ್ ಅವರು ರಾಜ್ಯ ಬಂದ್’ಗೆ ಕರೆ ನೀಡಲಿದ್ದಾರೆ. ಬೆಳಗಾವಿ ಡಿಸಿ ಅವರನ್ನ ಬೇರೆಡೆ ವರ್ಗಾವಣೆ ಮಾಡಲಿಲ್ಲವೆಂದರೇ, ದೊಡ್ಡ ಮಟ್ಟದ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಇನ್ನು ಕರವೇ ಶಿವರಾಮೇಗೌಡ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಮಹಾಂತೇಶ್ ರಣಗಟ್ಟಿಮಠ ಅವರು ಬೆಳಗಾವಿಯಲ್ಲಿ ಕನ್ನಡ ಮರಾಠಿ ಭಾಷಿಕರು ಸೌಹಾರ್ದತೆಯಿಂದ ಇದ್ದು, ಶುಭಂ ಶೇಳಕೆ ತಮ್ಮ ಹೇಳಿಕೆಯಿಂದ ತೊಂದರೆಯಾಗುತ್ತಿದ್ದು, ಆತನನ್ನು ಗಡಿಪಾರು ಮಾಡಬೇಕು. ಎಂ.ಇ.ಎಸ್. ಶಿವಸೇನೆಯನ್ನು ಬ್ಯಾನ್ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಕರ್ನಾಟಕಪರ ಠರಾವು ಪಾಸ್ ಮಾಡಬೇಕು. ಇಲ್ಲದಿದ್ದರೇ, ಕರವೇ ಶಿವರಾಮೇಗೌಡ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
