ಜಾಗತಿಕ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಇಂದು ನಗರದಲ್ಲಿ ವಿಭಿನ್ನವಾಗಿ ಯೋಗ ದಿನವನ್ನು ಆಚರಿಸಲಾಯಿತು. ಸ್ಕೇಟರ್ಸ್ಗಳು ಬರೋಬ್ಬರಿ 4 ಕಿಲೋ ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಯೋಗದ ಕುರಿತು ಯಶಸ್ವಿ ಜಾಗೃತಿ ಮೂಡಿಸಿದರು.

ಯೋಗ ಮಾಡುವುದರಿಂದ ಮನುಷ್ಯನು ದೈಹಿಕವಾಗಿ ಸದೃಢ ಹಾಗೂ ನಿರೋಗಿಯಾಗಿ ಇರಲು ಸಾಧ್ಯವಿದ್ದು, ವಿಶ್ವಕ್ಕೆ ಭಾರತ ನೀಡಿದ ಈ ಕೊಡುಗೆಯನ್ನು ಆಚರಿಸಲು ಬೆಳಗಾವಿಯ ಗೋವಾವೇಸ್ ಸ್ಕೇಟಿಂಗ್ ರಿಂಕ್ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಕೇಟರ್ಸ್ಗಳು 4 ಕಿಲೋ ಮೀಟರ್ ಸ್ಕೇಟಿಂಗ್ ರ್ಯಾಿಲಿ ನಡೆಸಿ, ‘ಯೋಗ ಕರೋ ನಿರೋಗ್ ರಹೋ’ ಘೋಷಣೆಗಳೊಂದಿಗೆ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿದ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ನಿತೀನ್ ಜಾಧವ್, ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ರಕ್ಷಣೆಗಾಗಿ ಯೋಗ ಅತಿ ಪ್ರಮುಖ ಭಾಗವಾಗಬೇಕು ಎಂದು ಕರೆ ನೀಡಿದರು. ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ಹಿಂದಲಗೇಕರ್ ನೇತೃತ್ವದಲ್ಲಿ ನಡೆದ ಈ ರ್ಯಾ ಲಿಯಲ್ಲಿ ಪ್ರಣವ್ ಗಿಧೆಮಲಿ, ಸಮೃದ್ಧ ಬಾನಿ, ಆರವನಂದ ರೋnದ, ರಾಜವೀರ್ ಪಾಟೀಲ್, ಪ್ರಾಣಿಕಾ ಮೋಟೇಕರ್, ರೀವಾ ನಾಯಕ್, ನಿಸ್ಮಿತಾ ಹೋರಕರಿ, ಹವೀಶ್ ನಾಯ್ಡು, ಪ್ರೀತಮ್ ಬಾಗೇವಾಡಿ, ಸಿದ್ದಾರ್ಥ್ ಪಾಟೀಲ್, ಋತ್ವಿಕ್ ದುಬಾಶಿ, ಅಮಿಷಾ ವರ್ಣೇಕರ್, ದುರ್ವಾ ಪಾಟೀಲ್, ಆಸ್ತ್ರಾ ಸೂರ್ಯವಂಶಿ, ಅಂಜಲಿ ಧವಳೆ, ಆರ್ಶಾನ್ ಮಾಡೀವಾಳೆ ಹಾಗೂ ರೋಹಿಣಿ ಪಾಟೀಲ್ ಸೇರಿದಂತೆ ಎಲ್ಲಾ ಸ್ಕೇಟರ್ಸ್ಗಳು ಮತ್ತು ಅವರ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
