ಪ್ರತಿ ನಿತ್ಯ ಯೋಗ ಮಾಡಿದರೆ ಮಾತ್ರ ಆರೋಗ್ಯ ವಂತ ರಾಷ್ಟ್ರ ಸ್ಥಾಪಿಸ ಬಹುದು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಮಹಾಸ್ವಾಮಿಗಳು ಹೇಳಿದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ದು ಹುಕ್ಕೇರಿ ನಗರದ ಗುರು ಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ ಹಿರೇಮಠದ ಗುರುಕುಲ ಹಾಗೂ ವಿರೂಪಾಕ್ಷ ಲಿಂಗ ಶಿವಾಚಾರ್ಯ ವೈದಿಕ ಜ್ಯೋತಿಷ್ಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು .



ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಗುರು ಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷರಾದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನ ಆರಂಭಿಸುವುದರ ಮುಖಾಂತರ ಇಡೀ ವಿಶ್ವಕ್ಕೆ ಭಾರತದ ಮೂಲ ಯೋಗವನ್ನು ಪರಿಚಯಿಸಿದ ಕೀರ್ತಿ ಸಲ್ಲುತ್ತದೆ ನಾವೆಲ್ಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಿನ ಮಾತ್ರ ಯೋಗವನ್ನು ಮಾಡಿದರೆ ಸಾಲದು . ನಿತ್ಯ ಯೋಗ ಮಾಡುವುದರ ಮುಖಾಂತರ ರೋಗವನ್ನು ದೂರ ತಳ್ಳಿ ಎಲ್ಲದಕ್ಕೂ ದಿವ್ಯ ಔಷಧ ಯೋಗವೇ ಆಗಿದೆ ಎಂದರು

ಈ ಸಂದರ್ಭದಲ್ಲಿ ಸಂಪತ್ ಕುಮಾರ್ ಶಾಸ್ತ್ರಿಗಳು , ಸಹ ಶಿಕ್ಷಕ ಮಲ್ಲಿಕಾರ್ಜುನ ಅವರು ಮಕ್ಕಳಿಗೆ ಯೋಗವನ್ನ ಹೇಳಿಕೊಟ್ಟರು.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.
