ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸಾ ಉಪ ಸಮಿತಿ ರಾಜ್ಯ ಸಲಹಾಗಾರರಾಗಿ ಸಮೀಪದ ಮಾರೀಹಾಳ ಗ್ರಾಮದ ಡಾ. ಡಿ. ಎನ್ ಮಿಸಾಳೆ ನೇಮಕಗೊಂಡಿದ್ದಾರೆ. ಇವರ ಈ ನೇಮಕವನ್ನು ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಯ ಆಡಳಿತ ಮಂಡಳಿ ಖಚಿತ ಪಡಿಸಿ ಅಧಿಕ್ರತ ಆದೇಶ ಹೊರಡಿಸಿದೆ.
ಡಾ ಮಿಸಾಳೆ ಈ ಮೊದಲು ಬೆಳಗಾವಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಯ ಕಾರ್ಯದರ್ಶಿ ಯಾಗಿ ೩ ವರ್ಷ ಸೇವೆ ಸಲ್ಲಿಸಿದವರಾಗಿದ್ದು,
ಬೆಳಗಾವಿ ಬಿ ಕೆ ಪದವಿ ಕಾಲೇಜಿನ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿ ನಿವ್ರತ್ತಿಯಾದವರು. ಸದ್ಯ ಬೆಳಗಾವಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ನೇಮಕವು ಗ್ರಾಮದ ಮತ್ತು ನಾಡಿನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಹರ್ಷ ಮೂಡಿಸಿದ್ದು, ಬೆಳಗಾವಿ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ನಿವ್ರತ್ತ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಬಿ.ವ್ಹಿ ಪಾಟೀಲ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

