ಇತ್ತಿಚಿಗೆ ಹುಕ್ಕೇರಿ ಪೋಲಿಸ್ ಠಾಣಾ ಹದ್ದಿನಲ್ಲಿ ಕಳ್ಳತನವಾದ ಹಾಗೂ ಕಳೆದು ಹೋದ 22 ಮೋಬೈಲಗಳನ್ನು ಅವುಗಳ ವಾರಸುದಾರರಿಗೆ ಮರಳಿಸಿದ ಹುಕ್ಕೇರಿ ಪೋಲಿಸರು.

ಗೋಕಾಕ ಡಿ ವೈ ಎಸ್ಪಿ ರವಿ ನಾಯಕ ನೇತೃತ್ವದಲ್ಲಿ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಗಣಾಚಾರಿ ಮತ್ತು ಪಿ ಎಸ್ ಆಯ್ ಸತೀಶ ಎಚ್ ರವರು ಸುಮಾರು ಎರಡು ಲಕ್ಷ ಎಂಬತೈದು ಸಾವಿರ ರೂಪಾಯಿ ಮೌಲ್ಯದ 22 ಮೊಬೈಲ್ ಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಕಳೆದು ಹೋದ ಮೊಬೈಲ್ ಗಳನ್ನು ಮರಳಿ ಪಡೆದ ವಾರಸಯದಾರರು ಪೋಲಿಸರ ಕಾರ್ಯಕ್ಕೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಅರ್ಜುನ್ ಮಸರಗುಪ್ಪಿ ಕ್ರೈಂ ಸಿಬ್ಬಂದಿ ಮಂಜುನಾಥ್ ಕಬ್ಬೂರ್ ರಾಜು ಪಡತರೆ ಕುಮಾರ್ ಕರೆನ್ನವರ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
