BELAGAVI

ಬೆಳಗಾವಿಯ ಸಾಯಿ ಮಂದಿರದಲ್ಲಿ ಸಾಯಿಬಾಬಾಗೆ ಸುವರ್ಣಾವಕಾಶ: 1,000 ಮಾವಿನ ಹಣ್ಣುಗಳ ವಿಶೇಷ ಅಲಂಕಾರ, ಭಕ್ತ ಸಾಗರ!

Share

ಬೆಳಗಾವಿಯ ಖಾಸಬಾಗ್‌ನ ರಾಘವೇಂದ್ರ ಕಾಲನಿಯಲ್ಲಿರುವ ಶ್ರೀ ಸಾಯಿ ರಾಮ್ ಮಂದಿರದಲ್ಲಿ ಇಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿವೆ.
ಇಂದು ಬಾಬಾರಿಗೆ ಬರೊಬ್ಬರಿ 1,000 ಮಾವಿನ ಹಣ್ಣುಗಳ ವಿಶೇಷ ಅಲಂಕಾರ ಮಾಡಿ ಭಕ್ತರ ಕಣ್ಣಿಗೆ ಹಬ್ಬವನ್ನುಂಟು ಮಾಡಲಾಯಿತು.

ಬೆಳಗಾವಿಯ ಖಾಸಬಾಗ್ ರಾಘವೇಂದ್ರ ಕಾಲನಿಯ ಶ್ರೀ ಸಾಯಿರಾಮ್ ಮಂದಿರದಲ್ಲಿ ಇಂದು ನಡೆದ ವಿಶೇಷ ಆಮ್ರ ಅಲಂಕಾರ ಪೂಜೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ, ಸಾಯಿನಾಥರ ಭವ್ಯ ದರ್ಶನ ಪಡೆದು ಪುನೀತರಾದರು. ಇಡೀ ಸಾಯಿ ಮಂದಿರ ಮಾವಿನ ಹಣ್ಣುಗಳ ಸುಗಂಧ ಹಾಗೂ ಭಕ್ತರ ಜಯಘೋಷದಿಂದ ಕಂಗೊಳಿಸುತ್ತಿತ್ತು.

ಇನ್ನು ಈ ವಿಶೇಷ ಪೂಜೆಯ ಮತ್ತೊಂದು ವಿಷೇಶತೆ ಎಂದರೆ ಇಂದು ಸಂಜೆಯ ಧೂಪಾರತಿ ಹಾಗೂ ಮಹಾಮಂಗಳಾರತಿಯ ಬಳಿಕ, ದೇವಸ್ಥಾನಕ್ಕೆ ಅಲಂಕಾರ ಮಾಡಲಾಗಿದ್ದ 1,000 ಮಾವಿನ ಹಣ್ಣುಗಳನ್ನೇ ದರ್ಶನಕ್ಕೆ ಬಂದ ಭಕ್ತ ಮಹಾಶಯರಿಗೆ ಪ್ರಸಾದದ ರೂಪದಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಮಹೇಶ್ ವೆರ್ನೆಕರ ನೇತೃತ್ವದ ದೇವಸ್ಥಾನದ ಮಂಡಳಿಯು ಭಕ್ತರ ದರ್ಶನ ಹಾಗೂ ಪ್ರಸಾದ ವಿತರಣೆಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ಭಕ್ತ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.ಬೆಳಗಾವಿ ಖಾಸಬಾಗ್‌ನ ಶ್ರೀ ಸಾಯಿ ರಾಮ್ ಮಂದಿರದ ದೈನಂದಿನ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಮಾಹಿತಿ ನೀಡಿದ ಕಾರ್ಯದರ್ಶಿ ಶ್ರೀಧರ್ ತಿಗಡಿ ಅವರು, ಮಂದಿರದಲ್ಲಿ ಪ್ರತಿದಿನ ನಿಯಮಿತವಾಗಿ 4 ಬಾರಿ ವಿಶೇಷ ಪೂಜೆ ಹಾಗೂ ಆರತಿಗಳು ಜರುಗುತ್ತವೆ ಎಂದಿದ್ದಾರೆ. Byte

Tags:

error: Content is protected !!