BELAGAVI

ಬೆಳಗಾವಿಯ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಗೆ ಹೈ ಅಲರ್ಟ್ ಶಾಕ್:

Share

ಬೆಳಗಾವಿ ತಿಲಕವಾಡಿಯಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದ ಹಿನ್ನೆಲೆ ಶುಕ್ರವಾರ ಎರಡನೇ ದಿನವೂ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದೆ.

ಬೆಳಗಾವಿ ಎಸಿ ಶ್ರವಣಕುಮಾರ ನಾಯಕ್ ನೇತೃತ್ವದ ತಂಡ ನಿನ್ನೆ ಕಂಪನಿ ಕಚೇರಿಗೆ ದಾಳಿ ನಡೆಸಿದ್ದು, ಇಂದು ಕೂಡ ಕಂದಾಯ ಇಲಾಖೆ, ಸಹಕಾರ ಇಲಾಖೆ ಹಾಗೂ ಸೈಬರ್ ಕ್ರೈಮ್ ಪೊಲೀಸರ ಸಂಯುಕ್ತ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಕಂಪನಿಯ ಸಿಇಒ ಮಹಾರಾಷ್ಟ್ರ ಮೂಲದ ಬಾಲರಾಜ್ ಮಾನೆ ವಿಚಾರಣೆಗೆ ಇದುವರೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ದೇಶಾದ್ಯಂತ ಕಂಪನಿಗೆ ಒಟ್ಟು 9 ಶಾಖೆಗಳಿದ್ದು, ಬೆಳಗಾವಿ, ಬೆಂಗಳೂರು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಇದುವರೆಗೆ ಸುಮಾರು 5 ಸಾವಿರ ಹೂಡಿಕೆದಾರರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆದರೆ ಹೂಡಿಕೆದಾರರ ಹಾಗೂ ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿ ನೀಡಲು ಕೆಲ ಸಿಬ್ಬಂದಿಗಳು ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಂಪನಿಯ ಮ್ಯಾನೇಜರ್ ಸೇರಿ ಹಲವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು, ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಘಟನೆಯ ಹಿನ್ನೆಲೆ ಎಸಿಪಿಎಲ್ ಕಚೇರಿ ಸುತ್ತಮುತ್ತ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

Tags:

error: Content is protected !!