ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿ ಊಟ, ಪೂರಕ ಪೋಷಣ ಆಹಾರ, ಉಚಿತ ಶೈಕ್ಷಣಿಕ ಪ್ರವಾಸ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ. ಸರ್ಕಾರ ಮಕ್ಕಳ ಪ್ರಗತಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಶಿಕ್ಷಕರು ಸಹ ಅವೆಲ್ಲವನ್ನು ಮಕ್ಕಳಿಗೆ ತಲುಪಿಸುವಲ್ಲಿ ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ ಇದನ್ನು ಪಾಲಕರ ಸಹ ಅರಿತುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ತಾವು ಸಹ ಕೈಗೂಡಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕೆಂದು ಬೆಳಗಾವಿ ತಾಲೂಕ ಅಕ್ಷರ ದಾಸೋಹ ಅಧಿಕಾರಿ ರವಿ ಜವಳೇಕರ ಹೇಳಿದರು.


ಬೆಳಗಾವಿ ತಾಲೂಕಿನ ಕಾಕತಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ 2026 27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮಕ್ಕಳಿಗೆ ಹೂಗಳನ್ನು , ಉಚಿತ ಸೌಲಭ್ಯಗಳಾದ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿ ಆತ್ಮೀಯವಾಗಿ ಸ್ವಾಗತಿಸುತ್ತಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣ ಕುರುಬರ ಮಾತನಾಡಿ ಮಕ್ಕಳ ಹಾಜರಾತಿಯ ಜೊತೆಗೆ ಮಕ್ಕಳ ಕಲಿಕೆಯ ಸಲುವಾಗಿ ಪಾಲಕರೆಲ್ಲರೂ ಸಹ ಶ್ರಮವಹಿಸೋಣ ಎಂದರು. ಇದಕ್ಕೂ ಮುಂಚೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿ ಬಳಗ ಗ್ರಾಮದಲ್ಲಿ ಪ್ರಭಾಕರ್ ಮಾಡುವುದರ ಮೂಲಕ ಪ್ರಾರಂಭೋತ್ಸವದ ಕುರಿತು ಜಾಗೃತಿ ಮೂಡಿಸಿದರು. ಇದೇ ಸಮಯದಲ್ಲಿ ಹೊಸದಾಗಿ ಆಗಮಿಸಿದ ಮಕ್ಕಳಿಗೆ ಪುಷ್ಪ ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಜಮುನಾ ಕೋಳಿ ರೇಣುಕಾ ಕೋಳಿ, ಸಿದ್ರಾಯಿ ಸುತಾರ, ದಸ್ತಗೀರ ಕೊಣ್ಣೂರ, ಲಲಿತ ಮಹಾಜನಶೆಟ್ಟಿ, ಗೀತಾ ಕಾನಟ್ಟಿ, ಶಶಿಕಲಾ ಹೊಸೂರ, ಶ್ರೀದೇವಿ ಮರಕುಂಬಿ,ಶ್ರೀದೇವಿ ದಿಬ್ಬಿ,ಶಕುಂತಲಾ ಕರಾಳೆ, ಗೀತಾ ಗುಡಿ, ಸುಮಿತ್ರಾ . ರಾವುತ,ಸುಮಿತ್ರಾ ಕರವಿನಕೊಪ್ಪ, ಶಮಿಮಾ ಹುಬ್ಬಳ್ಳಿ ಸೇರಿದಂತೆ ಶಾಲಾ ಶಿಕ್ಷಕರು ಎಸ್ ಡಿ ಎಮ್ ಸಿ ಸದಸ್ಯರು ಮತ್ತು ಪಾಲಕರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಶಿಕ್ಷಕ ಅಶೋಕ್ಹೋತ್ ಸ್ವಾಗತಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು ಗಿರೀಶ ಜಗಜಂಪಿ ವಂದಿಸಿದರು.

