ಉತ್ತರ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ (IGP) ಅಧಿಕಾರ ಸ್ವೀಕರಿಸಿರುವ ದಕ್ಷ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರಿಗೆ ಬೆಳಗಾವಿಯಲ್ಲಿ ವಕೀಲರ ಸಂಘದ ವತಿಯಿಂದ ಅದ್ಧೂರಿ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವಧಿಯಲ್ಲಿ ಅವರು ಮಾಡಿದ ಜನಸ್ನೇಹಿ ಕಾರ್ಯವನ್ನು ವಕೀಲರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಐಜಿಪಿ ಸಂದೀಪ್ ಪಾಟೀಲ್ ಅವರ ದಕ್ಷ ಹಾಗೂ ಜನಸ್ನೇಹಿ ಕಾರ್ಯವೈಖರಿಯನ್ನು ವಕೀಲರು ಕೊಂಡಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂದೀಪ್ ಪಾಟೀಲ್ ಅವರು, “ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವಿನ ಸಮನ್ವಯ ಅತ್ಯಂತ ಅಗತ್ಯ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾದ ಅಡ್ವೊಕೇಟ್ ಅಣ್ಣಾಸಾಹೇಬ್ ಘೋರ್ಪಡೆ, ಅಡ್ವೊಕೇಟ್ ಆರ್. ಪಿ. ಪಾಟೀಲ್, ಅಡ್ವೊಕೇಟ್ ಎನ್. ಆರ್. ಲಾತೂರ್, ಅಡ್ವೊಕೇಟ್ ಮಾರುತಿ ಕಾಮಾಣ್ಣಾಚೆ, ಅಡ್ವೊಕೇಟ್ ರಾಜು ಹಿರೇಮಠ್, ಅಡ್ವೊಕೇಟ್ ವಿನೋದ್ ಪಾಟೀಲ್, ಅಡ್ವೊಕೇಟ್ ನಿಂಗಪ್ಪ ಮಸ್ತಿ, ಅಡ್ವೊಕೇಟ್ ಮೋಹಿತೆ, ಅಡ್ವೊಕೇಟ್ ಮಹೇಂದ್ರ ಕಾಂಬ್ಳೆ, ಅಡ್ವೊಕೇಟ್ ವಿಭೂತಿಮಠ್, ಅಡ್ವೊಕೇಟ್ ರಾಜೇಂದ್ರ ನಲವಡೆ ಹಾಗೂ ಅಡ್ವೊಕೇಟ್ ಎಂ. ಬಿ. ಬೋಂದ್ರೆ ಸೇರಿದಂತೆ ಹಲವು ಹಿರಿಯ ವಕೀಲರು ಉಪಸ್ಥಿತರಿದ್ದು, ನೂತನ ಐಜಿಪಿ ಅವರಿಗೆ ಮುಂದಿನ ಯಶಸ್ವಿ ವೃತ್ತಿಜೀವನಕ್ಕೆ ಶುಭ ಹಾರೈಸಿದರು.

