ಕರ್ನಾಟಕ ರಾಜ್ಯ ಸಚಿವ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಆಗ್ರಹ ಹರಳಯ್ಯ ಸಮಗಾರ ಸಮಾಜದ ಪಂಚ ಕಮಿಟಿ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಹರಳಯ್ಯ ಸಮಗಾರ ಸಮಾಜದ ಪಂಚ ಕಮೀಟಿಯ ಸದಸ್ಯರಾದ ಲಕ್ಷ್ಮಣ್ ಮಾಚಕನೂರ್ ಅವರು ಕರ್ನಾಟಕ ಸಚಿವ ಸಂಪುಟ ಪುನಾರಚಣೆಯ ವೇಳೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು. ಶಾಸಕ ಆಸೀಫ್ ಸೇಠ್ ಅವರು ಜಾತ್ಯಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೇ, ಬೆಳಗಾವಿಯ ಅಭಿವೃದ್ಧಿಗೆ ಪೂರಕವಾಗುತ್ತದೆ.

ಮಾಧ್ಯಮಗೋಷ್ಟಿಯಲ್ಲಿ ರಾಜೇಂದ್ರ ಬೀಡಕರ, ದೇವೇಂದ್ರ ಕಾಂಬಳೆ, ಪರಶರಾಮ್ ತೋರೆ, ಗಣಪತಿ ಕಾಂಬಳೆ, ಸಚೀನ್ ಮಾನೆ, ಶ್ರೀದೇವಿ ಕಾಳೆ ಕಿರಣ್ ಮುರಗೋಡ, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
