ಕಾರ್ಮಿಕರ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಿಐಟಿಯು ರಾಜ್ಯ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಜಮಾಯಿಸಿದ ನೂರಾರು ಕಾರ್ಮಿಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಇಂದು ರಾಜ್ಯಾದ್ಯಂತ ಸಿಐಟಿಯೂ ರಾಜ್ಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿದ್ದು, ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಲಾಯಿತು.

2023 ರಿಂದ ವೇತನ ಪರಿಷ್ಕರಣೆಯನ್ನು ಮಾಡಬೇಕೆಂಬುದು ಪ್ರತಿಭಟನೆಯ ಮುಖ್ಯ ಉದ್ಧೇಶವಾಗಿದೆ. 2016-17 ರ ಅಧಿಸೂಚನೆ ಈಗ ಜಾರಿಯಾಗಿದ್ದು, 1 ಕೋಟಿ 70 ಲಕ್ಷ ಕಾರ್ಮಿಕರಿಗೆ ವೇತನವನ್ನು ಬಿಟ್ಟು ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ಪುರ್ವಾನ್ವಯ ಮಾಡಬೇಕು. ಸೆಮಿ ಸ್ಕೀಲ್, ಅನ್ ಸ್ಕೀಲ್ಡ್ ಕಾರ್ಮಿಕರಿಂದ ಆರಂಭವಾದ 36 ಸಾವಿರ ರೂಪಾಯಿ ಕನಿಷ್ಠ ವೇತನವನ್ನು ನೀಡಬೇಕು. ಸುಪ್ರೀಂಕೋರ್ಟ್ ಕೂಡ ವೈಜ್ಞಾನಿಕ ಲೆಕ್ಕಾಚಾರವನ್ನು ಮಾಡಬೇಕೆಂದು ಆದೇಶಿಸಿದೆ. ಅದನ್ನು ರಾಜ್ಯ ಸರ್ಕಾರ ಪರಿಗಣಿಸಿಬೇಕು. ಮೇ 9 ರಿಂದ ಭಾರತ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡು ಬಂಡವಾಳಿಗರ ಪರವಾಗಿ ಗುಲಾಮರಾಗಿ ಕೆಲಸ ಮಾಡುವಂತಹ ನಿಯಮಗಳನ್ನು ಜಾರಿಗೆ ತಂದಿದೆ. ಇದನ್ನ ನಾವು ಖಂಡಿಸುತ್ತೇವೆ. ಕೇಂದ್ರದ ಈ ನೀತಿಗೆ ಖಾಸಗಿ ಕಾರ್ಖಾನೆಗಳು, ಸರ್ಕಾರದ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರ ಕಾಯಂಮಾತಿಗೆ ವಿಶೇಷ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಕಾರ್ಮಿಕ ಹೋರಾಟಕ್ಕೆ ಸ್ಪಂದಿಸದಿದ್ದರೇ, ಮುಂಬರುವ ದಿನಗಳಲ್ಲಿ ತೀವ್ರ ಪ್ರತಿಭಟನೆಯ ಬಿಸಿ ಸರ್ಕಾರ ತಟ್ಟಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಐಟಿಯು ಕಾರ್ಯಕರ್ತರು ಭಾಗಿಯಾಗಿದ್ಧರು.
