ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಪರಿಶ್ರಮದಿಂದ ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮಾತ್ರವಲ್ಲದೆ, ಸಾರ್ವಜನಿಕರ ಸುಗಮ ಸಂಚಾರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸಾಕಷ್ಟು ಅನುದಾನವನ್ನು ತಂದು ಜನರ ಕನಸಿನ ರಸ್ತೆಗೆ ಚಾಲನೆ ನೀಡಿದ ಶಾಸಕರು, ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ.


ಇಂದು ಕಿತ್ತೂರು ಕ್ಷೇತ್ರದ ಮಾರ್ಗನಕೊಪ್ಪ ಗ್ರಾಮದ ಪ್ರಮುಖ ರಸ್ತೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 110 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಜೊತೆಗೆ ಅದೇ ಗ್ರಾಮದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಾಯಿತು.


ಪ್ರತಿಯೊಂದು ಗ್ರಾಮಗಳಿಗೂ ಒಂದೊಂದು ಕೊಡುಗೆಯನ್ನು ನೀಡುತ್ತಿರುವ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲರು, ಕೋಟಿಗಟ್ಟಲೆ ಹಣವನ್ನು ತಂದು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದ ಹಲವು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಕಿತ್ತೂರು ಕ್ಷೇತ್ರದಲ್ಲಿ ಗ್ರಾಮಗಳ ಸಂಪರ್ಕಕ್ಕೆ ರಸ್ತೆ ಅಭಿವೃದ್ಧಿಯ ಮಹಾಪೂರವೇ ಹರಿದುಬಂದಿದ್ದು, ಶಾಸಕರು ಗ್ರಾಮೀಣ ರಸ್ತೆಗಳಿಗೆ ಹೊಸ ರೂಪ ನೀಡಿದ್ದಾರೆ.
ಇವತ್ತಿನ ಈ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ, ಶಿವಯೋಗಿ ದೊಡ್ಡಮನಿ, ಸುರೇಶ್ ಕಾಕತಿ, ದೇಸಾಯಿ ಲಕ್ಷ್ಮಣ ಪಾಟೀಲ, ಸಂಗಣ್ಣಗೌಡ ಪಾಟೀಲ, ಮುದ್ದಕಪ್ಪ ಮರಡಿ, ಬಸನಗೌಡ ಪಾಟೀಲ, ಬಸವರಾಜ ಬಸರಕೊಂಡ, ಶಿವು ಪಾಟೀಲ ಸೇರಿದಂತೆ ಗ್ರಾಮದ ಗುರುಹಿರಿಯರು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
