State

ಎಸ್‌ಐಆರ್‌ನಿಂದ ದೇಶದಲ್ಲಿ ಭಾರಿ ಅನಾಹುತಗಳ ಆತಂಕ

Share

ದೇಶದಲ್ಲಿ ಮತದಾನದ ಹಕ್ಕು ಮತ್ತು ದಾಖಲಾತಿ ಪ್ರಕ್ರಿಯೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌.ಐ.ಆರ್ ವ್ಯವಸ್ಥೆಯಿಂದಾಗಿ ದೇಶಾದ್ಯಂತ ದೊಡ್ಡ ಮಟ್ಟದ ಅನಾಹುತಗಳು ಸೃಷ್ಟಿಯಾಗುತ್ತಿದ್ದು, ಬಡವರು ತಮ್ಮ ಪ್ರಜಾಪ್ರಭುತ್ವದ ಅತಿ ದೊಡ್ಡ ಹಕ್ಕನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಎಚ್ಚರಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಸ್.ಐ.ಆರ್ ನಿಂದಾಗಿ ಇಡೀ ದೇಶದಲ್ಲಿ ಭಾರಿ ಅನಾಹುತಗಳಾಗುತ್ತಿವೆ. ಸಾಮಾನ್ಯ ಜನರು ಮತ್ತು ಬಡವರಿಗೆ ಇನ್ನು ಇದರ ಪರಿಚಯವನ್ನು ಮಾಡಿ ಕೊಟ್ಟಿಲ್ಲ. 50-60-90 ಲಕ್ಷ ಜನರನ್ನು ಪ್ರತಿ ರಾಜ್ಯದಿಂದ ತೆಗೆಯುತ್ತಿದ್ದಾರೆ. ಎಲ್ಲ ಬಡವರು ಕೂಡ ಅರ್ಜಿ ಸಲ್ಲಿಸಬೇಕು. ಇಲ್ಲವೆಂದರೇ, ಅವರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಯಾವುದೇ ಹಕ್ಕು ಸಿಗಲ್ಲ. ಈ ದೃಷ್ಟಿಯಿಂದ ಸರ್ಕಾರ ಬೇಕಾದ ದಾಖಲೆಗಳನ್ನು ಒದಗಿಸಿ ಕೊಡಬೇಕು. ಕೇರಳ, ಬಂಗಾಳದಲ್ಲಿ ಇದನ್ನು ಮಾಡಿದ್ದಾರೆ. ಕೆಲವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದಾರೆ. ಎಲ್ಲ ಪಕ್ಷದವರು ತಮ್ಮ ಪ್ರತಿನಿಧಿಗಳನ್ನು ನೇಮಿಸಲಿ. ಸರ್ಕಾರದಿಂದ ಯಾವುದೇ ತಪ್ಪಾಗಬಾರದು. ಗುಳೆಗೆ ಹೋದ ಜನರು ಪೇಚಿಗೆ ಸಿಲುಕುತ್ತಾರೆ. ಎಲ್ಲರೂ ತಮ್ಮ ಮತಗಳನ್ನು ಉಳಿಸಿಕೊಳ್ಳಲಿ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

Tags:

error: Content is protected !!