ವಿಜಯಪುರ ನಗರದ ಕೆಎಸ್ಆರ್ಟಿಸಿಯ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಒಂಬತ್ತನೆಯ ಮದ್ರಾಸ್ ರೆಜಿಮೆಂಟಿನ 13ನೆಯ ಫ್ಯಾಮಿಲಿ ವಾರ್ಷಿಕ ಸ್ನೇಹ ಸಮ್ಮೇಳನವು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಜರ್ ಜನರಲ್ ಕೆಎಸ್ ಕುಂಬಾ ರ ಅವರು ನಿವೃತ್ತ ಸೈನಿಕರ ಜೀವನದ ಭದ್ರತೆಯ ಬಗ್ಗೆ ಹಣಕಾಸಿನ ಸುರಕ್ಷತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಚಂದ್ರಕಾಂತ್ ಬಿ, ಬಾಗಲಕೋಟೆಯ ಅಧ್ಯಕ್ಷರಾದ ಶ್ರೀಶೈಲ ಪಸಾರ, ಖಜಮಿಯಾ, ವಿ ಆರ್ ಪಟ್ಟಣಶೆಟ್ಟಿ, ಸಿದ್ದಪ್ಪ ಎಸ್ ಅಲ್ಲದೆ ಆಂಧ್ರಪ್ರದೇಶದ ಅಧ್ಯಕ್ಷರಾದ ಸುಬ್ಬರವ, ತೆಲಂಗಾಣದ ಕ್ಯಾಪ್ಟನ್ ರಫೀಕ್, ತಮಿಳುನಾಡಿನ ಸುಬೇಧಾರ್ ಮೇಜರ್ ಆನಂದ್, ಕೇರಳದ ಸುಬೇದಾರ್ ಜಾನ್ ಮ್ಯಾಥೂ ಜಿಲ್ಲೆಯ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಈರಣ್ಣ ತೊಂಡಿ ಕಟ್ಟಿ, ಸಂತೋಷ್ ಕುಮಾರ್ ಹವಾಯಿ ವಂದಿಸಿದರು.ಸಂಗೀತಾ ನಿರ್ವಹಣೆ ಮಾಡಿದರು.

